ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಟ್ವಿಸ್ಟ್: ಮಿಡ್‌ವೀಕ್ ಎಲಿಮಿನೇಷನ್?

Share with

ಬೆಂಗಳೂರು: ‘ಬಿಗ್ ಬಾಸ್ ಕನ್ನಡ-13’ ಮನೆಯಲ್ಲಿ ಈ ವಾರ ಭಾರೀ ಟ್ವಿಸ್ಟ್‌ ಎದುರಾಗಿದ್ದು, ಮಿಡ್‌ವೀಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಕಂಡುಬಂದಿದೆ. ಇದರ ಜೊತೆಗೆ ವೈಲ್ಡ್‌ಕಾರ್ಡ್ ಸ್ಪರ್ಧಿಯ ಎಂಟ್ರಿಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇತ್ತೀಚಿನ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಾವು ಈ ಸ್ಥಾನಕ್ಕೆ ಬರಲು ಕಾರಣರಾದ ವ್ಯಕ್ತಿಯ ಫೋಟೋಗೆ ಪಂಚ್ ಮಾಡಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಲಿಖಿತ್ ಅವರು ಕ್ಯಾಪ್ಟನ್ ಸಂಗೀತಾ ಅವರ ಫೋಟೋಗೆ ಪಂಚ್ ಮಾಡಿ, “ನಾನಿವತ್ತು ಈ ಸ್ಥಾನದಲ್ಲಿ ನಿಲ್ಲಲು ನೀವೇ ಕಾರಣ” ಎಂದು ಹೇಳಿದ್ದಾರೆ. ಸೌಂದರ್ಯ ಅವರು ಕಿರಣ್‌ ಅವರ ಫೋಟೋಗೆ ಪಂಚ್ ಮಾಡಿದ್ದಾರೆ.

ತಾಂಡವ್ ಅವರು ಧನುಷ್‌ ಅವರ ಫೋಟೋಗೆ ಪಂಚ್ ಮಾಡುತ್ತಾ, “ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಮಾತುಗಳು ನೋವು ಕೊಟ್ಟಿವೆ” ಎಂದು ಹೇಳಿದ್ದಾರೆ. ಮತ್ತೊಂದೆಡೆ, “ನನ್ನವರು ಅನ್ನೋರು ಯಾರೂ ಇಲ್ಲ. ಆದರೂ ಇಲ್ಲಿ ಆಡ್ತಾ ಇದ್ದಾರೆ” ಎಂದು ಭಾವುಕರಾದ ಜಗ್ಗಿ, ಕಾವ್ಯ ಅವರ ಫೋಟೋಗೆ ಪಂಚ್ ಮಾಡಿದ್ದಾರೆ.

ಕೊನೆಯಲ್ಲಿ ಲಕೋಟೆಯಲ್ಲಿ ಬರುವ ಹೆಸರುಗಳನ್ನು ಸ್ಪರ್ಧಿಗಳು ಕ್ಯಾಮೆರಾಗೆ ತೋರಿಸಬೇಕು. ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮನೆಯಿಂದ ಹೊರಹೋಗಲಿದ್ದು, ಸೇಫ್ ಆದವರು ತಮ್ಮ ಆಟವನ್ನು ಮುಂದುವರಿಸಲಿದ್ದಾರೆ.

ಇದೇ ವೇಳೆ, ಅಡ್ವಾಂಟೇಜ್ ಪಡೆದ ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಶೇಷ ಚಟುವಟಿಕೆ ನೀಡಿದ್ದಾರೆ. ಪ್ರತಿಯೊಬ್ಬ ಅಡ್ವಾಂಟೇಜ್ ಪಡೆದ ಸದಸ್ಯರು ತಮಗೆ ಇಷ್ಟವಾದ ಒಬ್ಬ ಸ್ಪರ್ಧಿಯ ಈ ವಾರದ ಒಟ್ಟು ವೋಟ್‌ಗಳಲ್ಲಿ ಶೇ.50ರಷ್ಟು ವೋಟ್‌ಗಳನ್ನು ತಮ್ಮದಾಗಿಸಿಕೊಳ್ಳಬೇಕು. ಆ ಮೂಲಕ ತಮ್ಮ ವೋಟ್‌ಗಳನ್ನು ಹೆಚ್ಚಿಸಿಕೊಂಡು ಎಲಿಮಿನೇಷನ್‌ನಿಂದ ಪಾರಾಗುವ ಅವಕಾಶ ನೀಡಲಾಗಿದೆ.


Share with

Leave a Reply

Your email address will not be published. Required fields are marked *