ನವದೆಹಲಿ: ದೆಹಲಿಯ ಜನಪ್ರಿಯ ಲವ-ಕುಶ ರಾಮಲೀಲಾ ಸಮಿತಿಯು ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆಯನ್ನು ರಾವಣನ ಪತ್ನಿ ‘ಮಂಡೋದರಿ’ ಪಾತ್ರಕ್ಕೆ ಆಯ್ಕೆ ಮಾಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಾಂಡೆಯನ್ನು ಬದಲಾಯಿಸುವಂತೆ ಬಿಜೆಪಿ ಮತ್ತು ವಿಶ್ವ ಹಿಂದು ಪರಿಷದ್ (ವಿಎಚ್ಪಿ) ಆಗ್ರಹಿಸಿವೆ.

ಸಮಿತಿಯ ಉಪಾಧ್ಯಕ್ಷರೂ ಆಗಿರುವ ದೆಹಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ಶಂಕರ್ ಕಪೂರ್ ಈ ಸಂಬಂಧ ಸಂಘಟಕರಿಗೆ ಶನಿವಾರ ಪತ್ರ ಬರೆದಿದ್ದಾರೆ. ಇದಕ್ಕೂ ಮುನ್ನ ವಿಎಚ್ಪಿ ದೆಹಲಿ ಘಟಕದ ಕಾರ್ಯದರ್ಶಿ ಸುರೇಂದ್ರ ಗುಪ್ತಾ ಕೂಡ, ಸೆಪ್ಟೆಂಬರ್ 22ರಿಂದ ನಡೆಯುವ ರಾಮಲೀಲಾದಲ್ಲಿ ಮಂಡೋದರಿ ಪಾತ್ರವನ್ನು ಪಾಂಡೆ ನಿರ್ವಹಿಸುವುದನ್ನು ವಿರೋಧಿಸಿದ್ದರು.




