Udupi: ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ಲಕ್ಷಾಂತರ ರೂಪಾಯಿ ವಂಚನೆ

Share with

ಉಡುಪಿ: ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಘಟನೆ ನಡೆದಿದೆ.

ಪುನೀತ್ ಆನಂದ ಕೋಟ್ಯಾನ್ ಎಂಬಾತ ಬ್ಯಾಂಕ್‌ ಆಫ್ ಮಹಾರಾಷ್ಟ್ರದ ಉಡುಪಿ ಶಾಖೆಗೆ ಬಂದು 50 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು 3,20,000 ರೂ. ಪಡೆದುಕೊಂಡಿದ್ದ. ಅನಂತರ ಜು. 2ರಂದು ಸುಮಾರು 177.40 ಗ್ರಾಂ ಆಭರಣ ಅಡವಿಟ್ಟು 9,99,000 ರೂ. ಪಡೆದುಕೊಂಡಿದ್ದ. ಆತನು ವಿವಿಧ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡಿರುವ ಬಗ್ಗೆ ಶಾಖಾಧಿಕಾರಿಗೆ ಮಾಹಿತಿ ತಿಳಿದುಬಂದ ಕಾರಣ ಆತ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಧೃಡಪಟ್ಟಿತು.

ಸಾಲ ಪಡೆಯುವ ಸಮಯ ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ಭಾವಿಸುವ ಹಾಗೆ ಮಾಡಿ ಬ್ಯಾಂಕ್‌ನಿಂದ ಒಟ್ಟಾರೆ 13,19,000 ರೂ. ಸಾಲ ಪಡೆದು ವಂಚನೆ ಎಸಗಿದ್ದಾನೆ ಎಂದು ಶಾಖಾಧಿಕಾರಿ ಅಭಿಷೇಕ್ ಗೌಡ ಅವರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


Share with

Leave a Reply

Your email address will not be published. Required fields are marked *