ಪವರ್ಫುಲ್ ‘ವಿಲನ್’ ಪರಿಚಯಿಸಿದ ರಾಜಮೌಳಿ, ಹಾಲಿವುಡ್ ಸ್ಪೂರ್ತಿ?

Share with

ರಾಜಮೌಳಿಯ ಸಿನಿಮಾಗಳಲ್ಲಿ ವಿಲನ್ಗಳಳಿಗೆ ಹೀರೋಗಳಷ್ಟೆ ಪ್ರಾಧಾನ್ಯತೆ ಇರುತ್ತದೆ. ಅತ್ಯುತ್ತಮ ನಟರನ್ನೇ ವಿಲನ್ ಪಾತ್ರಕ್ಕೆ ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ, ‘ಈಗ’ ಸಿನಿಮಾನಲ್ಲಿ ಸುದೀಪ್, ‘ಬಾಹುಬಲಿ’ ಸಿನಿಮಾನಲ್ಲಿ ರಾಣಾ ದಗ್ಗುಬಾಟಿ, ‘ಆರ್ಆರ್ಆರ್’ನಲ್ಲಿ ಹಾಲಿವುಡ್ ನಟ, ಇದೀಗ ರಾಜಮೌಳಿ ತಮ್ಮ ಮುಂದಿನ ಸಿನಿಮಾನಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ವಿಲನ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಪೃಥ್ವಿರಾಜ್ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ರಾಜಮೌಳಿ ಸಿನಿಮಾಗಳಲ್ಲಿ ವಿಲನ್ಗಳು ದೈತ್ಯ ದೇಹಿಗಳಾಗಿ ಕಾಣಿಸಿಕೊಳ್ಳುವುದು ಹೆಚ್ಚು ಆದರೆ ಈ ಸಿನಿಮಾನಲ್ಲಿ ಪೃಥ್ವಿರಾಜ್ ಅಂಗವಿಕಲನ ಪಾತ್ರದಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಸಿನಿಮಾದ ಪ್ರಮುಖ ವಿಲನ್ ಆಗಿದ್ದರೂ ಸಹ ಅವರದ್ದು ಅಂಗವಿಕಲನ ಪಾತ್ರ. ಆದರೆ ತಂತ್ರಜ್ಞಾನದ ನೆರವಿನಿಂದ ತಾನು ಅಂದುಕೊಂಡಿದ್ದನ್ನು ಸಾಧಿಸಲು ಹೊರಟಿರುವ ಪಾತ್ರವದು.

ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಪೃಥ್ವಿರಾಜ್ ಸುಕುಮಾರ್ ವೀಲ್ಚೇರ್ ಮೇಲೆ ಕೂತು ಕೋಪದಿಂದ ಮುನ್ನುಗ್ಗುತ್ತಿದ್ದಾರೆ. ಅವರ ಎರಡು ಕಾಲುಗಳು, ಒಂದು ಕೈ ಬಡಲಾಗಿ ಸ್ವಾಧೀನ ಇಲ್ಲದಿರುವುದು ತಿಳಿಯುತ್ತಿದೆ. ಆದರೆ ಅವರು ಕೂತಿರುವ ವ್ಹೀಲ್ಚೇರ್ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಭರ್ತಿಯಾಗಿದೆ. ಅವರ ವ್ಹೀಲ್ ಚೇರ್ಗೆ ನಾಲ್ಕು ಕೈಗಳಿವೆ. ‘ಸ್ಪೈಡರ್ಮ್ಯಾನ್’ ಸಿನಿಮಾದ ವಿಲನ್ ಡಾ ಅಕ್ಟೋಪಸ್ ಬೆನ್ನಿಗೆ ಇದ್ದ ಕೈಗಳನ್ನು ಇವು ಹೋಲುತ್ತಿವೆ. ವ್ಹೀಲ್ ಚೇರ್ಗೆ ದೊಡ್ಡ ಕುರ್ಚಿ ಇದೆ. ದೊಡ್ಡ ಚಕ್ರಗಳು ಇವೆ. ಒಟ್ಟಾರೆ ಪೃಥ್ವಿರಾಜ್ ಬಹಳ ಬುದ್ಧಿವಂತ, ತಂತ್ರಜ್ಞಾನ ಪರಿಣಿತ ವಿಲನ್ ರೀತಿ ಪೋಸ್ಟರ್ನಲ್ಲಿ ಕಾಣುತ್ತಿದ್ದಾರೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ‘ಕುಂಭ’.

ಪೋಸ್ಟರ್ ಹಂಚಿಕೊಂಡಿರುವ ರಾಜಮೌಳಿ, ಪೃಥ್ವಿರಾಜ್ ಬಗ್ಗೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಪೃಥ್ವಿರಾಜ್ ಸುಕುಮಾರ್ ಅವರ ಮೊದಲ ಶಾಟ್ ತೆಗೆದ ಕೂಡಲೇ ಅವರ ಬಳಿಗೆ ಹೋಗಿ, ‘ನನಗೆ ಪರಿಚಯವಿರುವ ನಟರಲ್ಲೇ ಅತ್ಯುತ್ತಮ ನಟ ನೀವು’ ಎಂದು ಹೇಳಿದೆ’ ಎಂದಿದ್ದಾರೆ ರಾಜಮೌಳಿ. ಮುಂದುವರೆದು, ‘ಈ ದುಷ್ಟ, ನಿರ್ದಯಿ, ಪ್ರಭಾವಶಾಲಿ ವಿಲನ್ ಕುಂಭಾ ಪಾತ್ರಕ್ಕೆ ಜೀವ ತುಂಬಿದ್ದು ನಿರ್ದೇಶಕನಾಗಿ ತುಂಬಾ ತೃಪ್ತಿಕರವಾಗಿತ್ತು. ಈ ಪಾತ್ರಕ್ಕೆ ಜೀವ ತುಂಬಲ ಒಪ್ಪಿಕೊಂಡಿದ್ದಕ್ಕೆ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.


Share with

Leave a Reply

Your email address will not be published. Required fields are marked *