ತನ್ನ ಪ್ರಿಯಕರ ಪಲಾಶ್ ಮುಚ್ಚಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸ್ಮೃತಿ ಮಂಧಾನ NOV 20 ರಂದು ಘೋಷಿಸಿದ್ದರು. ಅದೇ ತಿಂಗಳ 23ಕ್ಕೆ ಮದುವೆ ನಡೆಯಬೇಕಿತ್ತು, ಆದರೆ ಸ್ಮೃತಿ ತಂದೆಗೆ ಹೃದಯಾಘಾತವಾದ ಕಾರಣ ಕೊನೆ ಕ್ಷಣದಲ್ಲಿ ಮದುವೆ ನಿಂತುಹೋಯಿತು. ಆಕೆಯ ಗೆಳೆಯ ಕೂಡ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು.

ಆ ನಂತರ, ಪಲಾಶ್ ಬೇರೆ ಹುಡುಗಿಯೊಂದಿಗೆ ಚಾಟ್ ಮಾಡುತ್ತಿರುವ ಸ್ಟ್ರೀನ್ಶಾಟ್ಸ್ ವೈರಲ್ ಆದವು. ಮದುವೆ ರದ್ದಾಗಿದೆ ಎಂದು ಸ್ಮೃತಿ ಇಂದು ಘೋಷಿಸಿದ್ದಾರೆ. ಕಾರಣ ಬಹಿರಂಗಪಡಿಸಿಲ್ಲ.





