ಡಿ.21: ಚಿಕ್ಕಮುಡ್ನೂರು ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ, 73ರ ಸಂಭ್ರಮದ ಪ್ರಯುಕ್ತ ಸಾರ್ವಜನಿಕ ಕ್ರೀಡಾಕೂಟ

Share with

ಪುತ್ತೂರು: ಇಲ್ಲಿನ ಚಿಕ್ಕಮುಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.27ರಂದು ಶಾಲಾ ವಾರ್ಷಿಕೋತ್ಸವ ಹಾಗೂ 73ರ ಸಂಭ್ರಮ ಕಾರ್ಯಕ್ರಮ ನೆರವೇರಲಿದ್ದು ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ಪ್ರಯುಕ್ತ ಡಿ.21ರಂದು ಭಾನುವಾರ ಶಾಲಾ ಮಕ್ಕಳಿಗೆ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಸಾರ್ವಜನಿಕರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಗಳು ಹೀಗಿವೆ:
ಮಕ್ಕಳಿಗೆ ಗೋಣಿ ಚೀಲ ಓಟ, 100 ಮೀ.ಓಟ, ಲಿಂಬೆ ಚಮಚ, ಒಂಟಿ ಕಾಲಿನ ಓಟ, ಕಪ್ಪೆ ಜಿಗಿತ: ಪುರುಷರಿಗೆ ಗುಂಡು ಎಸೆತ, ಮಡಕೆ ಒಡೆಯುವುದು, 100 ಮೀ ಓಟ, ವಾಲಿಬಾಲ್ ಪಂದ್ಯಾಟ, ಹಗ್ಗಜಗ್ಗಾಟ, ರಿಲೇ ಓಟ: ಮಹಿಳೆಯರಿಗೆ ಗುಂಡು ಎಸೆತ, ಮಡಕೆ ಒಡೆಯುವುದು, ಬಕೆಟ್ ಗೆ ಚೆಂಡು ಹಾಕುವುದು, ಸಂಗೀತ ಕುರ್ಚಿ, ಲಿಂಬೆ ಚಮಚ ಓಟ, ತ್ರೋಬಾಲ್ ಪಂದ್ಯಾಟ, ಹಗ್ಗಜಗ್ಗಾಟ ಹಾಗೂ ಲಗೋರಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Share with

Leave a Reply

Your email address will not be published. Required fields are marked *