ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ದಸರಾ ರಜೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಅಕ್ಟೋಬರ್. 3ರಿಂದ ಅಕ್ಟೋಬರ್. 21ರವರೆಗೆ ಒಟ್ಟು 19 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ನೀಡಲಾಗಿದೆ. 2026-27ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಮೊದಲ ಶೈಕ್ಷಣಿಕ ಅವಧಿಯು ಅಕ್ಟೋಬರ್ 2ರಂದು ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ 3ರಿಂದ ದಸರಾ ರಜೆ ಆರಂಭವಾಗಲಿದೆ.
ದಸರಾ ರಜೆಯ ಬಳಿಕ ಅಕ್ಟೋಬರ್ 22ರಿಂದ ದ್ವಿತೀಯ ಶೈಕ್ಷಣಿಕ ಅವಧಿಯ ತರಗತಿಗಳು ಪುನರಾರಂಭಗೊಳ್ಳಲಿವೆ.




