ಬೆಂಗಳೂರು: ಬಿಗ್ ಬಾಸ್ ಮನೆಯ ಆಟ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಫಿನಾಲೆಗೆ ದಿನ ಸಮೀಪವಾಗುತ್ತಿದ್ದಂತೆ ರೋಚಕವಾಗಿ ಟಾಸ್ಕ್ ಕೂಡ ಸಾಗಿದೆ. ಅಂತಿಮ ಹಂತದ ಟಾಸ್ಕ್‌ಗಳಲ್ಲಿ ಸ್ಪಧಿಗಳು ಜಿದ್ದಾಜಿದ್ದಿಯಿಂದ ಹೋರಾಡಿದ್ದಾರೆ.

‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಫಿನಾಲೆ ಟಿಕೆಟ್ ಪಡೆಯುವ ಸುತ್ತಿನ ಟಾಸ್ಕೆಗೆ ಆಯ್ಕೆ ಆಗಲು ಧ್ರವಂತ್ – ಗಿಲ್ಲಿಗೆ ಒಂದು ಟಾಸ್ಕ್ ನೀಡಲಾಗಿದೆ. ಇದರಲ್ಲಿ ಗೆದ್ದವರು ‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗೆ ಆಯ್ಕೆ ಆಗಲಿದ್ದಾರೆ.
ಕಾಮಿಡಿ ಬಿಟ್ಟರೆ, ಟಾಸ್ಕ್ ಆಗಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಾಗೂ ಇತರೆ ವಿಷಯದಲ್ಲಿ ಗಿಲ್ಲಿ ಅವರ ಕೊಡುಗೆಯನ್ನು ನಾನು ಅಷ್ಟಾಗಿ ನೋಡಿಲ್ಲವೆಂದು ಧ್ರುವಂತ್ ಹೇಳಿದ್ದು, ಧ್ರುವಂತ್ – ಗಿಲ್ಲಿ ಮಧ್ಯೆ ಟಾಸ್ಕ್ ನಡೆದಿದೆ.
ಇನ್ನೊಂದು ಕಡೆ ರಾಶಿಕಾ – ಗಿಲ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ. ರಕ್ಷಿತಾ ಅವರ ವಿಚಾರದಲ್ಲಿ ಈ ಜಗಳ ನಡೆದಿದೆ.
ಮೂರು ಸದಸ್ಯರುವುಳ್ಳ ಎರಡು ತಂಡಗಳನ್ನು ಮೊದಲು ರಚಿಸಿಕೊಳ್ಳಬೇಕು. ಇದಕ್ಕೆ ರಕ್ಷಿತಾ ನಾನೇ ಆಡುತ್ತೇನೆ ಎಂದಿದ್ದಾರೆ. ಇದಕ್ಕೆ ರಾಶಿಕಾ, ರಕ್ಷಿತಾ ತುಂಬಾ ಪ್ಯಾನಿಕ್ ಆಗುತ್ತಾಳೆ. ಅವಳಿಗೆ ಟಾಸ್ಕ್ ಅರ್ಥನೇ ಆಗಲ್ಲ ಎಂದಿದ್ದಾರೆ.
ರಾಶಿಕಾ ಸ್ವಾರ್ಥಿ ಎಂದು ರಕ್ಷತಾ ಹೇಳಿದ್ದಾರೆ. ನಿಮಗೆ ವೈಯಕ್ತಿಕವಾಗಿ ಯಾವುದೇ ಕನೆಕ್ಷನ್ ಇಲ್ಲವೆಂದಿದ್ದಾರೆ. ಇದಕ್ಕೆ ರಾಶಿಕಾ ಅವರು ಗರಂ ಆಗಿದ್ದು, ಗಿಲ್ಲಿ ನಿನ್ನ ನಡುವೆ ಏನು ಕನೆಕ್ಷನ್ ಇದೆವೆಂದು ಪ್ರಶ್ನಿಸಿದ್ದಾರೆ.
ಪ್ರಶ್ನೆ ಮಾಡೋದು ಕೆಳಗಿಟ್ಟು ಮಾತನಾಡೋದಾ? ಎಂದು ಗಿಲ್ಲಿ ಮಧ್ಯ ಪ್ರವೇಶಿಸಿದ್ದಾರೆ.
ಅವರ ಬುದ್ದಿ ಅವರು ಬಿಟ್ಟು ಬಾಳಲ್ಲವೆನ್ನುವುದಕ್ಕೆ ಗಿಲ್ಲಿನೇ ಉದಾಹರಣೆ. ನಿನ್ನ ವ್ಯಕ್ತಿತ್ವ ಕೆಟ್ಟದಾಗಿದೆ ಎಂದು ರಾಶಿಕಾ ಗರಂ ಆಗಿದ್ದಾರೆ.
ಇನ್ನೊಂದು ಕಡೆ ಬಿಗ್ ಬಾಸ್ ಶುರುವಾಗಿ 100 ದಿನ ಕಳೆದಿದ್ದು, ಈ ಸಂಭ್ರ,ಮದ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.




