ಪರೀಕ್ಷೆ ಮುಗಿಸಿ ಗೆಳೆಯರ ಜೊತೆ ಸ್ನಾನಕ್ಕೆಂದು ಹೋದ ವಿದ್ಯಾರ್ಥಿ ಕಾಲುವೆಯಲ್ಲಿ ಮುಳುಗಿ ಮೃತ್ಯು

Share with

ಕೊಚ್ಚಿ: ಪರೀಕ್ಷೆ ಮುಗಿಸಿ ಗೆಳೆಯರ ಜೊತೆ ಕಾಲುವೆಯಲ್ಲಿ ಸ್ನಾನಕ್ಕೆಂದು ಇಳಿದ 10ನೇ ತರಗತಿ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವಳಯನ್‌ಚಿರಂಜರ ಪೆರಿಯಾ‌ರ್ ವಾಲಿ ಕಾಲುವೆಯಲ್ಲಿ ನಿನ್ನೆ ನಡೆದಿದೆ. ಕಂಡಂದರ ನಿವಾಸಿ ರಿನಾಸ್ (15) ಮೃತಪಟ್ಟ ವಿದ್ಯಾರ್ಥಿ.

ಈತ ಪೆರುಂಬಾವೂರ್ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಕಾಲುವೆಯಲ್ಲಿ ಭಾರೀ ಪ್ರವಾಹವಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ಸ್ನಾನ ಮಾಡಲು ಅವಕಾಶವಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.

ರಿನಾಸ್‌ಗೆ ಈಜಲು ತಿಳಿದಿರಲಿಲ್ಲವೆನ್ನಲಾಗಿದೆ. ಆದರೂ ಕಾಲುವೆಯಲ್ಲಿ ಸ್ನಾನಕ್ಕೆಂದು ಇಳಿದಿರುವ ವೇಳೆ ಪ್ರವಾಹಕ್ಕೆ ಸಿಲುಕಿದ್ದು ಗೆಳೆಯರು ರಕ್ಷಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ತಲುಪಿದ ಸ್ಥಳೀಯರು, ಅಗ್ನಿಶಾಮಕದಳ ಸೇರಿ ನಡೆಸಿದ ಹುಡುಕಾಟದಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಜಾಸ್ಮಿನ್ ಈತನ ತಾಯಿಯಾಗಿದ್ದು, ಇವರಿಬ್ಬರೂ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.


Share with

Leave a Reply

Your email address will not be published. Required fields are marked *