RSS ಹಿರಿಯ ಕಾರ್ಯಕರ್ತ ನಾಟಿ ವೈದ್ಯ ಗೋಪಾಲಕೃಷ್ಣ ಭಟ್ ವಿಧಿವಶ

Share with

ಕಂಗಿಲ: ಆ‌ರ್ ಎಸ್ ಎಸ್ ನ ಹಿರಿಯ ಕಾರ್ಯಕರ್ತರು, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯರು ಹಾಗು ಸ್ಥಳೀಯ ನಾಟಿ ವೈದ್ಯರಾಗಿದ್ದ ಗೋಪಾಲಕೃಷ್ಣ ಭಟ್ ನೀಲಗಿರಿ (88) ಅವರು ವಯೋ ಸಹಜ ಅಸೌಖ್ಯದಿಂದ ಮಂಗಳವಾರ (ಆ.11) ನಿಧನ ಹೊಂದಿದರು.

ಮೃತರು ಪತ್ನಿ ಸರಸ್ವತಿ, ಪುತ್ರಿ ವಿಜಯ ಲಕ್ಷ್ಮಿ ಬದಿಯಡ್ಕ ಹಾಗು ಪುತ್ರರಾದ ಡಾ| ಶ್ಯಾಮ್ ಸುಂದರ ಬೇಳ ಮತ್ತು ರಾಜ ಶೇಖರ ಭಟ್, ಸೊಸೆಯಂದಿರಾದ ಸಾವಿತ್ರಿ, ಸರಸ್ವತಿ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗೋಪಾಲಕೃಷ್ಣ ಭಟ್ ಅವರು ಸ್ಥಳೀಯವಾಗಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


Share with

Leave a Reply

Your email address will not be published. Required fields are marked *