ಪುತ್ತೂರು: ಕಬಕ – ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ 2.91 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ದೊರೆತಿದೆ ಎಂದು ಸಂಸದ ಕ್ಯಾ । ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಯೋಜನೆಯಡಿ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1 ರಲ್ಲಿ 2.91 ಕೋ. ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್‌ನಿರ್ಮಾಣವಾಗಲಿದೆ. ಪ್ರಸ್ತುತ ನಿಲ್ದಾಣದಲ್ಲಿ 531 ಚ. ಮೀ. ವಿಸ್ತೀರ್ಣದ ಶೆಲ್ವರ್‌ಮಾತ್ರ ಇದ್ದು, ಹೊಸ ಯೋಜನೆಯಡಿ 3,392 ಚ. ಮೀ. ವಿಸ್ತೀರ್ಣದ ವಿಶಾಲ ಶೆಲ್ವರ್‌ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಶೆಲ್ಟರ್ ನಿರ್ಮಾಣಕ್ಕೆ ಅಗತ್ಯ ಸ್ಥಳ ಗುರುತು ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನಿಲ್ದಾಣದಲ್ಲಿರುವ ಮೇಲ್ವೇತುವೆಗೆ ಪ್ಲಾಟ್‌ಫಾರ್ಮ್ ನಂ.2 ಮತ್ತು 3ರಲ್ಲಿ ತಲಾ ಒಂದರಂತೆ ಒಟ್ಟು 2 ಲಿಫ್ಟ್‌ಗಳ ಅಳವಡಿಕೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗೆ ಅಂದಾಜು 1.33 ಕೋ. ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಪ್ರಸ್ತುತ ರೈಲ್ವೇ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಸಂಸದರು 2024ರ ನವೆಂಬರ್‌ನಲ್ಲಿ ನೈಋತ್ಯ ರೈಲ್ವೇಯ ಜನರಲ್ ಮ್ಯಾನೇಜರ್‌ಅವರಿಗೆ ಪತ್ರ ಬರೆದು ಶೆಲ್ವರ್‌ವಿಸ್ತರಣೆ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿದ್ದರು.




