ಕಾಸರಗೋಡು: ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಕಾಸರಗೋಡು ನಗರಸಭೆಯ ತಾಳಿಪಡುಪು ಮತ್ತು ಕರಂದಕ್ಕಾಡು ವಾರ್ಡ್ಗಳ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಹರಿತ ಕರ್ಮ ಸೇನಾ ಸದಸ್ಯರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸನ್ಮಾನಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹಾಗೂ ತಾಳಿಪಡುಪು ವಾರ್ಡ್ ಕೌನ್ಸಿಲರ್ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಕರಂದಕ್ಕಾಡು ವಾರ್ಡ್ ಕೌನ್ಸಿಲರ್ ಹರೀಶ ಕೆ. ಆರ್., ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಆರ್. ನಾಯ್ಕ್ ಉಪಸ್ಥಿತರಿದ್ದರು.




