ಉಡುಪಿ ಜಿಲ್ಲಾದ್ಯಂತ ಸುಡು ಬಿಸಿಲು

Share with

ಉಡುಪಿ: ಜಿಲ್ಲಾದ್ಯಂತ ಶುಕ್ರವಾರ ಹಗಲಿನಲ್ಲಿ ಸಂಪೂರ್ಣ ಬಿಸಿಲಿನ ವಾತಾವರಣ ಕಂಡುಬಂತು. ಮಧ್ಯಾಹ್ನದ ವೇಳೆ ಬಿಸಿಲಿನ ಬಹಳಷ್ಟು ತಾಪಮಾನ ಏರಿಕೆಯಾಗಿತ್ತು. ಜಿಲ್ಲೆಯಲ್ಲಿ ಎಲ್ಲೂ ಮಳೆಯಾದ ಬಗ್ಗೆ ವರದಿಯಾಗಿಲ್ಲ.

ಗುರುವಾರ ರಾತ್ರಿ, ಶುಕ್ರವಾರ ಮುಂಜಾನೆ ಗ್ರಾಮಾಂತರ ಪ್ರದೇಶಗಳಲ್ಲಿ ಚಳಿಯ ಅನುಭವವಾಗಿದೆ. ಉಡುಪಿ ಜಿಲ್ಲೆಯಲ್ಲಿ ಅ. 2ರಂದು ಗರಿಷ್ಠ 33 ಮತ್ತು ಕನಿಷ್ಠ 27 ಡಿ.ಸೆ. ತಾಪಮಾನ ದಾಖಲಾಗಿತ್ತು. ಬೈಂದೂರು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಉಡುಪಿ, ಕಾರ್ಕಳ, ಕಾಪು ತಾಲೂಕುಗಳಲ್ಲಿ ಮೋಡ ಸಹಿತ ಬಿಸಿಲು ಕಂಡು ಬಂದಿದೆ.


Share with

Leave a Reply

Your email address will not be published. Required fields are marked *