ತಮಿಳುನಾಡು ಸಿಎಂ ಆಗಿ ನಾಳೆ ವಿಜಯ್ ಪ್ರಮಾಣ..?

Share with

ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ (108 ಸ್ಥಾನ) ಪಕ್ಷವಾಗಿ ರುವ ವಿಜಯ್ ಅವರ ನೇತೃತ್ವದ ಟಿವಿಕೆಯು ಮೇ 7ರಂದು ಸರ್ಕಾರ ರಚಿಸಲಿದೆ ಎಂದು ಮೂಲಗಳು ತಿಳಿಸಿದ್ದು, ಅಂದೇ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದಿದೆ. ಅವರೊಂದಿಗೆ 9 ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ಮಂಗಳವಾರ ಪಕ್ಷದ ನೂತನ ಶಾಸಕರೊಂದಿಗೆ ಸಭೆ ನಡೆಸಿ, ಮುಂದಿನ ನಡೆ ಬಗ್ಗೆ ಚರ್ಚಿಸಿದ ವಿಜಯ್ ರಾಜ್ಯಪಾಲರಿಗೆ ಇಮೇಲ್ ಮೂಲಕ ಸರ್ಕಾರ ರಚನೆ ಹಕ್ಕು ಮಂಡಿಸಿದ್ದಾರೆ. ಇನ್ನು ವಿಜಯ್ ಯಾರ ಜತೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

ಇತ್ತ ವಿಜಯ್ ಅವರೊಂದಿಗೆ ಎಐಎಡಿಎಂಕೆ ನಾಯಕ ಎಡ ಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸುತ್ತಿದ್ದಾರೆ ಎಂದೂ ವರದಿಯಾಗಿದೆ.

ಟಿವಿಕೆ ಆಯ್ಕೆಗಳು?

ಡಿಎಂಕೆ ಮಿತ್ರಪಕ್ಷಗಳಾದ ಕಾಂಗ್ರೆಸ್ (5 ಸೀಟು), ಸಿಪಿಐ (2), ಸಿಪಿಎಂ(2) ಮತ್ತು ವಿಸಿಕೆ(2)ಗೆ ಗಾಳ ಹಾಕಬಹುದು.

2006ರಲ್ಲಿ ಡಿಎಂಕೆ ಅಲ್ಪಮತದ ಸರ್ಕಾರ ರಚಿಸಿದ್ದ ಮಾದರಿಯಲ್ಲೇ ಟಿವಿಕೆ ಕೂಡ ಸರ್ಕಾರ ರಚಿಸಲು ಮುಂದಾಗಬಹುದು ಎಐಎಡಿಎಂಕೆ ಮಿತ್ರಪಕ್ಷ ಪಿಎಂಕೆ (5 ಕ್ಷೇತ್ರ) ಬೆಂಬಲವನ್ನು ಕೋರಬಹುದು. ಈ ಮಧ್ಯೆ ಎಐಡಿಎಂಕೆ ಬೆಂಬಲ ನೀಡಬ ಹುದು ಎಂಬ ಲೆಕ್ಕಾಚಾರ ಕೂಡ ಇದೆ ಅಲ್ಪಮತದ ಸರ್ಕಾರ ರಚಿಸಿದರೂ ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲಾಗಲಿದೆ.


Share with

Leave a Reply

Your email address will not be published. Required fields are marked *