ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಬಗ್ಗೆ ವಿವಿಧ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಪರಿಸರವನ್ನು ಉಳಿಸಿ ಬೆಳೆಸಿ, ಪ್ರತಿಯೊಂದು ಜೀವರಾಶಿಗಳಿಗೂ ಆಶ್ರಯವನ್ನು ಒದಗಿಸುವಂತೆ ಕರೆ ನೀಡಿದರು ಸಭೆಯ ಅಧ್ಯಕ್ಷ ಸ್ಥಾನವನ್ನು ವಿದ್ಯಾಪೀಠದ ಮಾತ್ರ ಸಮಿತಿ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಶೆಟ್ಟಿ ಅವರು ವಹಿಸಿದ್ದರು. ಆಡಳಿತ ಸಮಿತಿ ಸದಸ್ಯರಾದ ಶ್ರೀ ಸುಧಾಕರ್ ಸರ್, ಶ್ರೀ ವಿ ಬಿ ಕುಳಮರ್ವ ಕುಂಬ್ಳೆ, ಶ್ರೀ ಚಂದ್ರಹಾಸ ಇವರು ಉಪಸ್ಥಿತರಿದ್ದರು .

ಒಂದರಿಂದ ನಾಲ್ಕನೇ ತರಗತಿಯವರೆಗೆ ಚಿತ್ರಕಲೆ ಸ್ಪರ್ಧೆ, ಐದರಿಂದ ಎಂಟನೇ ತರಗತಿಯವರೆಗೆ ಭಿತ್ತಿಪತ್ರ ರಚನಾ ಸ್ಪರ್ಧೆ, 9 ಮತ್ತು 10ನೇ ತರಗತಿಯವರಿಗೆ ಭಾಷಣ ಸ್ಪರ್ಧೆ ನಡೆಯಿತು. ಒಟ್ಟು 11 ಶಾಲೆಗಳಿಂದ 60 ವಿದ್ಯಾರ್ಥಿಗಳು ಭಾಗವಹಿಸಿದರು ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಪ್ರಾಂಶುಪಾಲೆ ಶ್ರೀಮತಿ ಮಲ್ಲಿಕಾ ಪ್ರಮೋದ್ ಸ್ವಾಗತಿಸಿ,
ಅಧ್ಯಾಪಿಕೆ ಶ್ರೀಮತಿ ಸುಮಾ ಎನ್ ವಂದಿಸಿದರು. ಅಧ್ಯಾಪಿಕೆ ಕುಮಾರಿ ಚೈತನ್ಯ ಇವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು




