ಕಾಸರಗೋಡು: ಪಿಕ್ಸೆಲ್ ಡಿಜಿಟಲ್ ಪ್ರೆಸ್ ಕಾಸರಗೋಡು ಇದರ ಆಶ್ರಯದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ಜರಗಿತು.

ಸಮಾಜ ಸೇವಕರಾದ ಶ್ರೀ ಕೃಷ್ಣ ಪ್ರಸಾದ್ ಕೋಟೆಕಣಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಸ್ವಾತಂತ್ರ ಸಂಗ್ರಾಮದ ಕುರಿತು ಮಾತನಾಡಿದರು. ಉದಯಕುಮಾರ್ ಮನ್ನಿಪಾಡಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ಮಾಲಕರಾದ ಶಿನೋಜ್, ಹರಿಪ್ರಸಾದ್ ಉಪಸ್ಥಿತರಿದ್ದರು.
ವಾಣಿ ಹರಿ, ಮನೀಶ್, ಅಜಯ್, ಜಿತಾ, ಚಂದ್ರ, ಕಿರಣ್, ವಿದ್ಯಾಧರ, ಮಿಥುನ್, ಪದ್ಮ ಶಾಲಿನಿ,ಯೋಗೀಶ್, ಶೇಖರ್, ಅಜಿತ್, ಶೋದು, ವಿಜು, ಜಯಲಕ್ಷ್ಮಿ, ವಿಷ್ಣು, ತೇಜು ಹಾಗೂ ಮುಂತಾದ ಗಣ್ಯರು ನೇತೃತ್ವ ನೀಡಿದರು .




