ಕೇರಳ ಕೆಎಸ್ಸಾರ್ಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕನಿಗೆ ಹಲ್ಲೆ

Share with

ಮಂಗಳೂರು: ಕೇರಳ ಕೆಎಸ್ಸಾರ್ಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕನಿಗೆ ವ್ಯಕ್ತಿಯೊಬ್ಬ ಅವಾಚ್ಯಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಬಗ್ಗೆ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸು ನಿರ್ವಾಹಕ ಸತೀಶನ್ ಕೆ.ಪಿ. ಮತ್ತು ಸುರೇಶ್ ಎಂ.ಪಿ. ಗಾಯಗೊಂಡವರು. ಶನಿವಾರ ರಾತ್ರಿ ಕಾಸರಗೋಡಿಗೆ ಹೋಗುತ್ತಿದ್ದ ಬಸ್ಸಿಗೆ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ತಾರಾನಾಥ ಎಂಬಾತ ಹತ್ತಿ ಕುಳಿತಿದ್ದ.

ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಆತ ಬಸ್ಸಿನ ಗಂಟೆಗೆ ಕಟ್ಟಿದ್ದ ಹಗ್ಗವನ್ನು ಹಿಡಿದು ಎಳೆದಿದ್ದು, ನಿರ್ವಾಹಕ ಸತೀಶನ್ ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ. ಇದನ್ನು ತಡೆಯಲು ಬಂದ ಸುರೇಶ್ ಅವರ ಕೆನ್ನೆ ಮತ್ತು ತಲೆಗೆ ಹಲ್ಲೆ ನಡೆಸಿದ ಎಂದು ದೂರು ನೀಡಲಾಗಿದೆ.


Share with

Leave a Reply

Your email address will not be published. Required fields are marked *