ನೋಡನೋಡುತ್ತಲೆ ನಿಲ್ಲಿಸಿದ್ದ ಆಟೋರಿಕ್ಷಾ ಬೆಂಕಿಗಾಹುತಿ! ಸಂಪೂರ್ಣ ನಾಶ

Share with

ಕುಂಬಳೆ: ನಿಲ್ಲಿಸಿದ್ದ ಆಟೋರಿಕ್ಷಾ ಬೆಂಕಿಗಾಹುತಿಯಾಗಿ ನಾಶಗೊಂಡ ಘಟನೆ ಅ.27ರಂದು ಬದಿಯಡ್ಕದಲ್ಲಿ ನಡೆದಿದೆ.

ರವಿಕುಮಾರ್ ಎಂಬವರ ಆಟೋರಿಕ್ಷಾ ಬೆಂಕಿಗಾಹುತಿಯಾಗಿದೆ.

ಬಾಯಾರು ಬಳ್ಳೂರು ನಿವಾಸಿ ರವಿಕುಮಾರ್ ಎಂಬವರ ಆಟೋರಿಕ್ಷಾ ಬೆಂಕಿಗಾಹುತಿಯಾಗಿದೆ. ಶುಕ್ರವಾರ ರೋಗಿ ಒಬ್ಬರನ್ನು ರಿಕ್ಷಾದಲ್ಲಿ ಕುಂಬಳೆ ಆಸ್ಪತ್ರೆಗೆ ತಲುಪಿಸಿ, ಬಳಿಕ ರಿಕ್ಷಾವನ್ನು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಲ್ಲಿಸಲಾಗಿತ್ತು.

ರವಿಕುಮಾರ್ ಅಲ್ಪ ದೂರದಲ್ಲಿ ನಿಂತು ಓರ್ವರಲ್ಲಿ ಮಾತನಾಡುತ್ತಿದ್ದಂತೆ ರಿಕ್ಷಾ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾದರೂ ರಿಕ್ಷಾ ಪೂರ್ಣವಾಗಿ ಉರಿದು ನಾಶಗೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ ಎಂದು ಹೇಳಲಾಗುತ್ತಿದೆ.


Share with

Leave a Reply

Your email address will not be published. Required fields are marked *