ಪೈವಳಿಕೆ ಗ್ರಾಮ ಪಂಚಾಯತಿಯಿಂದ ಕುಟುಂಬ ಶ್ರೀ ಜನಕೀಯ ಕ್ಯಾಂಟೀನ್ ನಿರ್ಮಿಸಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ತಿಗೊಳಿಸಿ ಲೋಕಾರ್ಪಣೆಗೊಳಿಸಲು ಪಂಚಾಯತ್ ಅಧಿಕೃತರು ಮುತುವರ್ಜಿ ವಹಿಸುತ್ತಿಲ್ಲವೆಂದು ಸಾರ್ವಜನಿಕರಿಂದ ವ್ಯಾಪಕ ಆರೋಪಗಳು ಕೇಳಿ ಬರುತ್ತಿದೆ.


ಪಂಚಾಯತಿನ ವನಿತ ಫಂಡ್ ನಿಂದ ಸುಮಾರು 12 ಲಕ್ಷ ವೆಚ್ಚದಲ್ಲಿ ಹೆಚ್ಚು ಹಾಸಿದ ಕ್ಯಾಂಟೀನ್ ನಿರ್ಮಿಸಿ ಒಂದು ವರ್ಷ ಕಳೆದರೂ ಇನ್ನೂ ವಯರಿಂಗ್ ಕೆಲಸ ಬಾಕಿ ಇದೆ. ಅಲ್ಲದೆ ಮಳೆಗೆ ಸೋರುತ್ತಿರುವ ಬಗ್ಗೆಯೂ ಆರೋಪ ಉಂಟಾಗಿದೆ. ಹಲವು ಬಾರಿ ಪಂಚಾಯತ್ ಅಧಿಕೃತರಲ್ಲಿ ಕ್ಯಾಂಟೀನ್ ಸ ಕಾಮಗಾರಿ ಪೂರ್ತಿಗೊಳಿಸಿ ಕಾರ್ಯಾಚರಣೆ ಗೊಳಿಸಬೇಕೆಂದು ತಿಳಿಸಿದರು ಪಂಚಾಯತ್ ಅಧಿಕೃತರು ಮುತುವರ್ಜಿ ವಹಿಸುತ್ತಿಲ್ಲವೆಂದು ಪಂಚಾಯತ್ ಸಿ ಡಿ ಎಸ್ ಉದ್ಯೋಗಸ್ಥರು ತಿಳಿಸಿದ್ದಾರೆ.
ಇಕ್ಕಟ್ಟಾದ ಸ್ಥಳದಲ್ಲಿ ಇದೀಗ ಕ್ಯಾಂಟೀನ್ ಕಾರ್ಯಾಚರಿಸುತ್ತಿದೆ. ಸರಿಯಾದ ಅಡುಗೆ ಕೋಣೆ ಇಲ್ಲದೆ ಕೆಲಸ ಮಾಡುವ ಕುಟುಂಬ ಶ್ರೀ ಸದಸ್ಯರು ಕಷ್ಟವನ್ನು ಪಡುವಂತಾಗಿದೆ. ಇದೀಗ ಕಾರ್ಯಚರಿಸುತ್ತಿರುವ ಕ್ಯಾಂಟೀನ್ ಸಮಿತಿಯಲ್ಲಿ ಒಟ್ಟು ಏಳು ಮಂದಿ ಸದಸ್ಯರಿದ್ದು, ಸ್ಥಳದ ಅಭಾವದಿಂದ ಎಲ್ಲರಿಗೂ ಕೆಲಸ ನಿರ್ವಹಿಸಲು ಅಸಾಧ್ಯವಾಗಿದ್ದನ್ನಲಾಗಿದೆ. ಕೆಲಸ ನಿರ್ವಹಿಸುವ ಸದಸ್ಯರು ಬಡ ಕುಟುಂಬದವರಾಗಿದ್ದಾರೆ.
ನೂತನವಾಗಿ ನಿರ್ಮಿಸಿದ ಕ್ಯಾಂಟೀನ್ ತೆರೆದು ಕಾರ್ಯ ಆರಂಭಗೊಂಡಲ್ಲಿ ಉತ್ತಮ ರೀತಿಯಲ್ಲಿ ವ್ಯಾಪಾರ ಉಂಟಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಶೀಘ್ರವೇ ಇದರ ಕಾಮಗಾರಿಯನ್ನು ಪೂರ್ತಿಗೊಳಿಸಿ ಕಾರ್ಯಚರಿಸಲು ಪಂಚಾಯಿತಿ ಅಧಿಕೃತರು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನೂ ವಿಳಂಬಗೊಂಡಲ್ಲಿ ಪ್ರತಿಭಟನೆ ನಡೆಸಲು ಮುಂದಾಗಬೇಕಾದೀತು ಎಂದು ಸಾರ್ವಜನಿಕರಿಂದ ಮಾತುಗಳು ಕೇಳಿ ಬರುತ್ತಿದೆ.




