ತುಲಾಭಾರದ ವೇಳೆ ಹಗ್ಗ ಕಳಚಿ ಪೇಜಾವರ ಸ್ವಾಮೀಜಿಗೆ ಗಾಯ

Share with

ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಾಗ ಪೇಜಾವರ ಸ್ವಾಮೀಜಿ ಗಾಯಗೊಂಡಿದ್ದಾರೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸದ್ಯ ದೆಹಲಿ ಪ್ರವಾಸದಲ್ಲಿದ್ದು, ಅಲ್ಲಿರುವ ಪೇಜಾವರ ಮಠಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ.

ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಾಗ ಪೇಜಾವರ ಸ್ವಾಮೀಜಿ ಗಾಯಗೊಂಡಿದ್ದಾರೆ.

ಶ್ರೀಗಳು ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಭಕ್ತರು ಅವರಿಗೆ ತುಲಾಭಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಕ್ಕಡಿಯ ಹಗ್ಗ ತುಂಡಾಗಿ ಬಿದ್ದಿದ್ದು, ಸ್ವಾಮೀಜಿಯ ತಲೆಗೆ ಪರಚಿದ ಗಾಯವಾಗಿದೆ.


Share with

Leave a Reply

Your email address will not be published. Required fields are marked *