ಉಡುಪಿ: ಬರ ಪೀಡಿತ ತಾಲೂಕುಗಳ ನಿರ್ವಹಣೆಗಾಗಿ ಸರ್ಕಾರ ರಾಜ್ಯದ ಎಲ್ಲಾ ತಾಲೂಕುಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಮಾಡಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 3 ಕೋ.ರೂ. ಮೀಸಲಿಡಲಾಗಿದೆ. ಉಡುಪಿ ಜಿಲ್ಲಾ ಬರ ನಿರ್ವಹಣೆಗೆ 4.50ಕೋ.ರೂ ಬಿಡುಗಡೆ ಮಾಡಿದೆ.


ಬರ ತಾಲೂಕುಗಳಲ್ಲಿ ಕುಡಿಯುವ ನೀರು ಸಹಿತ ವಿವಿಧ ತುರ್ತು ಕಾಮಗಾರಿಗಳಿಗೆ ಈ ಅನುದಾನ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಉಡುಪಿ ಜಿಲ್ಲೆಯ ಬರ ನಿರ್ವಹಣೆ ಸಂಬಂಧ ಸರಕಾರದಿಂದ ಅನುದಾನ ಮಂಜೂರಾತಿಗೆ ಆದೇಶ ಆಗಿದ್ದು, ಇದರ ಪ್ರತಿ ಇನ್ನಷ್ಟೇ ಲಭ್ಯವಾಗವೇಕಿದೆ. ಅನುದಾನವನ್ನು ನಿರ್ದಿಷ್ಟ ಮಾನದಂಡದಂತೆ ವಿನಿಯೋಗ ಮಾಡಲಾಗುತ್ತದೆ. ಉಡುಪಿಯಲ್ಲಿ ತುರ್ತು ನಿರ್ವಹಣೆಗೆ ಸುಮಾರು 12 ಕೋ.ರೂ ಸದ್ಯ ಲಭ್ಯವಿದೆ ಎಂದು ಹೇಳಿದ್ದಾರೆ.




