ಮೀಯಪದವು: ಸೇವಾ ಸಹಕಾರಿ ಬ್ಯಾಂಕ್ 2023-28 ನೇ ರ‍್ಷದ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ಆಡಳಿತ ಮಂಡಳಿ ಸದಸ್ಯರ ಪದಗ್ರಹಣ ಕಾರ್ಯಕ್ರಮವು ಮೀಯಪದವು ಬ್ಯಾಂಕ್ ಪರಿಸರದಲ್ಲಿ ನಡೆಯಿತು.


ಆಡಳಿತ ಸಮಿತಿಗೆ ನೂತನ ಅಧ್ಯಕ್ಷರಾಗಿ ರಘುನಾಥ ಶೆಟ್ಟಿ ಕೊಮ್ಮಂಗಳ, ಉಪಾಧ್ಯಕ್ಷೆ ಯಾಗಿ ನಬೀಸತ್ ಮಿಸಿರಿಯಾ ಅವಿರೋಧವಾಗಿ ಆಯ್ಕೆಯಾದರು. ನಂತರ ನಡೆದ ಕರ‍್ಯಕ್ರಮದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷರಾದ ರಘುನಾಥ ಶೆಟ್ಟಿ ವಹಿಸಿದ್ದರು.
ಅಭಿನಂದನೆ ಸಲ್ಲಿಸಿಕೊಂಡು ಮೀಂಜ ಪಂಚಾಯತು ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ರಾದ ಜಯರಾಮ ಬಳ್ಳಂಗೂಡೆಲ್, ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಾಬು ಕುಳೂರು ಕ್ಯಾಂಪ್ಕೋ ನರ‍್ದೇಶಕರಾದ ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ, ವಿ ವಿ ಎ ಯು ಪಿ ಶಾಲಾ ಸಂಚಾಲಕ ಶ್ರೀಧರ ರಾವ್, ಪಂಚಾಯತು ಸದಸ್ಯರಾದ ಜನರ‍್ಧನ ಪೂಜಾರಿ, ಪ್ರಭಾಕರ ಶೆಟ್ಟಿ, ಚುನಾವಣಾ ಅಧಿಕಾರಿ ಸುನಿಲ್ ಕುಮಾರ್, ಬೈಜುರಾಜ್, ಸಹಕಾರ ವೇದಿಕೆ ಸಂಚಾಲಕ ವಹೀದ್ ಕೂಡೆಲ್, ಬಾಲಪ್ಪ ಬಂಗೇರ, ಜೆ.ಮೊಹಮ್ಮದ್, ಚಂದ್ರಶೇಕರ ಶೆಟ್ಟಿ ಪಲ್ಲತಡ್ಕ, ಡಿ.ಕಮಲಾಕ್ಷ , ಶ್ರೀ ಮೊಹಮ್ಮದ್ ಕುಂಞ, ಮಜಿಬೈಲು ಬ್ಯಾಂಕ್ ಉಪಾಧ್ಯಕ್ಷರಾದ ಚಿಕ್ಕಪ್ಪ ಶೆಟ್ಟಿ ಮೊದಲಾದವರು ಮಾತನಾಡಿದರು. ಬ್ಯಾಂಕ್ ಕರ‍್ಯರ‍್ಶಿ ಜಯಶ್ರೀ ಸ್ವಾಗತಿಸಿ ರಾಮಚಂದ್ರ ಟಿ ವಂದಿಸಿದರು.




