ಪೋಟೊ ಎಡಿಟ್ ಮಾಡಿ ಮಾನಹಾನಿ ಆರೋಪ; ಮೂವರ ವಿರುದ್ಧ ಪ್ರಕರಣ ದಾಖಲು

Share with

ಕಡಬ: ಮಾನಹಾನಿ ರೀತಿಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೋರ್ವರ ಪೊಟೊ ಎಡಿಟ್ ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ಸಿ.ಇ.ಎನ್‌. ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರ ವಿರುದ್ಧ ಪ್ರಕರಣ ದಾಖಲು.

ಐತ್ತೂರು ನಿವಾಸಿ, ಐತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕೆ. ಯಾನೆ ಸತ್ಯ ಪೂಜಾರಿ ಸಿ.ಇ.ಎನ್. ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಐತ್ತೂರಿನ ಪ್ರವೀಣ್ ಟಿ., ಬಂಟ್ರದ ಉಮೇಶ್ ಬಿ., ಐತ್ತೂರಿನ ನಿತಿನ್ ಕುಮಾರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ಸತೀಶ್ ಅವರ ತೇಜೋವಧೆ, ಮಾನಹಾನಿ ಮಾಡುವ ಉದ್ದೇಶದಿಂದ, ಯಾವುದೋ ಅಶ್ಲೀಲ ಪೋಟೋ/ವೀಡಿಯೋದಲ್ಲಿರುವ ವ್ಯಕ್ತಿಯ ಚಿತ್ರಕ್ಕೆ ಸತೀಶ್ ಅವರ ಪೋಟೋವನ್ನು ಎಡಿಟ್ ಮಾಡಿ, ಅದನ್ನು ವಾಟ್ಸಾಪ್ ಮೂಲಕ‌ ಸತೀಶ್ ಅವರ ಪರಿಚಯಸ್ಥರಿಗೆ ಕಳುಹಿಸಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದ.ಕ.ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 35/2023 ಕಲಂ:66(E),67(A) IT act ರಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.


Share with

Leave a Reply

Your email address will not be published. Required fields are marked *