
ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯದ ಆಶ್ರಯದಲ್ಲಿ ನಡೆಯಲಿರುವ ಆಟೋಟ ಸ್ಪರ್ಧೆ ಹಾಗೂ ಗುರುಪೂಜಾ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಕೆಪುಲಕೋಡಿಯವರ ಅಧ್ಯಕ್ಷತೆಯಲ್ಲಿ ಮೈಸ್ ಕಂಪ್ಯೂಟರ್ ಕಲ್ಲಡ್ಕದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರು ‘ಡಿಸೆಂಬರ್ 10 ರಂದು ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕ್ರೀಡಾಕೂಟವನ್ನು ಹಾಗೂ ಡಿಸೆಂಬರ್ 24 ರಂದು ಕಲ್ಲಡ್ಕ ಪಂಚವಟಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಗುರು ಪೂಜಾನ ಕಾರ್ಯಕ್ರಮ ನಡೆಯಲಿರುವುದು, ಸಂಘದ ಎಲ್ಲಾ ಸದಸ್ಯರು ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಸಭೆಯಲ್ಲಿ ಕಲ್ಲಡ್ಕ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಹೊಸಕಟ್ಟ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್ ಬಂಗೇರ, ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ಕಲ್ಲಡ್ಕ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷ ಪುಷ್ಪ ದೇವಸ್ಯ, ಬಿಲ್ಲವ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ ತೋಟ, ಜಯಪ್ರಕಾಶ್ ತೆಕ್ಕಿಪಾಪು, ಮಾಧವ ಸಾಲಿಯಾನ್ ಕುದ್ರಬೆಟ್ಟು, ಶ್ರೀಧರ ಅಮ್ಟೂರು, ಶಿವಾನಂದ ಎಳ್ತೀಮಾರ್, ಸಂತೋಷ್ ಕುಮಾರ್ ಬೊಳ್ಪೋಡಿ, ಶೇಖರ್ ದಾಸಕೋಡಿ, ಬಿ ಆರ್ ಜಯಪ್ರಶಾಂತ್, ಸುಧಾಕರ್ ವೀರಕಂಭ, ಮೋಹನ್ ದಾಸ್ ಪಾದೆ, ಸತೀಶ್ ಕುಮಾರ್ ಬಾಯಿಲ, ಮೋಹನ್ ನರಹರಿನಗರ್, ಜಯಂತ್ ಕಟ್ಟೆಮಾರ್, ಪ್ರದೀಪ್ ಶಾಂತಿಪಳಿಕೆ, ರೋಹಿಣಿ ಸುಧೆಕಾರ್, ಲಾವಣ್ಯ ಕುಂಟಿಪಾಪು, ಸುಧಾ ಸುಧೆಕಾರ್ ಮತ್ತು ಸುಜಾತ ಪೂರ್ಲಿಪಾಡಿ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.




