ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು

Share with

ಪುತ್ತೂರು : ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ರವರಿಗೆ ಮನೆಯಲ್ಲಿ ವಾಕಿಂಗ್ ನಡೆಸುವ ವೇಳೆ ಹಾವು ಕಚ್ಚಿರುವ ಬಗ್ಗೆ ವರದಿಯಾಗಿದೆ.

ಮಠಂದೂರು ರವರು ಸಂಜೆ ವೇಳೆ ಮನೆ ಸಮೀಪ ವಾಕಿಂಗ್ ನಡೆಸುತ್ತಿದ್ದು, ಈ ವೇಳೆ ಹಾವು ಕಚ್ಚಿದೆ ಎನ್ನಲಾಗಿದೆ.

ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಅವರು ಯಾವುದೇ ಅಪಾಯವಿಲ್ಲದೆ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *