ಪುತ್ತೂರು: ಪ್ರಯಾಣಿಕರೊಬ್ಬರು ಬಸ್ಸಿನಡಿಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಶುಕ್ರವಾರ(ಡಿ.8) ಸಂಜೆ ಸಂಭವಿಸಿದೆ.


ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಕುಂಞರಾಮ ಮಣಿಯಾಣಿ (68) ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಕೇರಳದ ಅಡೂರಿನಿಂದ ಮುಳ್ಳೇರಿಯಾ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಬಂದು ಗಾಳಿಮುಖದಲ್ಲಿ ಇಳಿದ ಅವರು, ಬಸ್ಸಿನ ಎದುರು ಭಾಗದ ಮೂಲಕವಾಗಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅವರನ್ನು ಗಮನಿಸದೆ ಚಾಲಕ ಬಸ್ಸು ಚಲಾಯಿಸಿದ್ದು, ಅವರ ಎದೆ ಭಾಗದ ಮೇಲೆಯೇ ಬಸ್ಸಿನ ಚಕ್ರವೊಂದು ಹರಿದು ಹೋಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




