ಉಪ್ಪಳ: ಬೇಕೂರು ಬೊಳ್ಳಾರು ನಿವಾಸಿ [ದಿ] ದೂಮಪ್ಪ ಪಂಡಿತ್ರವರ ಪುತ್ರ ಧಾರ್ಮಿಕ ಮುಂದಾಳು ದಾಮೋದರ ಬೊಳ್ಳಾರು [59] ನಿಧನರಾದರು. ಎರಡು ದಿನಗಳ ಹಿಂದೆ ಮನೆಯಲ್ಲಿ ಅಸೌಖ್ಯ ಉಂಟಾಗಿದ್ದು, ಕಾಸರಗೋಡು ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

![ಬೇಕೂರು ಬೊಳ್ಳಾರು ನಿವಾಸಿ [ದಿ] ದೂಮಪ್ಪ ಪಂಡಿತ್ರವರ ಪುತ್ರ ಧಾರ್ಮಿಕ ಮುಂದಾಳು ದಾಮೋದರ ಬೊಳ್ಳಾರು](https://veekshakavani.com/wp-content/uploads/2023/12/ದಾಮೋದರ-ಬೊಳ್ಳಾರು.jpg)
ಡಿ.14ರಂದು ಮುಂಜಾನೆ ಹೃದಯಘಾತದಿಂದ ನಿಧನರಾದರು. ಇವರು ಮನೆಯಲ್ಲಿ ಸಿದ್ದ ಉಡುಪು ತಯಾರಿಸಿ ವಿತರಣೆ ಮಾಡುತ್ತಿದ್ದರು. ಯುವಶಕ್ತಿ ಪ್ರೆಂಡ್ಸ್ ಸರ್ಕಲ್ ಗ್ರಂಥಾಲಯ ಸುಭಾಸ್ ನಗರ ಇದರ ಅಧ್ಯಕ್ಷರು, ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸದಸ್ಯರು ಸವಾಕ್ ಮಂಜೇಶ್ವರ ಏರಿಯಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸುಮಲತ, ಮಕ್ಕಳಾದ ಮನೀಶ್, ಮನ್ಮಿತ, ಸಹೋದರ, ಸಹೋದರಿಯರಾದ ವಿಶ್ವನಾಥ ಪೂಜಾರಿ, ಕೃಷ್ಣಪ್ಪ ಪೂಜಾರಿ, ವಾಸುದೇವ, ಜನಾರ್ಧನ ಕೋಟ್ಯಾನ್, ಜಲಜಾಕ್ಷಿ, ಶಶಿಕಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ವಿವಿಧ ರಾಜಕೀಯ ನೇತಾರರು, ಧಾರ್ಮಿಕ ಮುಂದಾಳು ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.




