ಅಜಿಲಮೊಗರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಜೈ ಹನುಮಾನ್ ಶಾಖೆ ರುದ್ರಗಿರಿ ಅಜಿಲಮೊಗರು ಘಟಕದ ಕಾರ್ಯಕರ್ತರಾದ ಕೀರ್ತಿ ಶೇಷ ವಿಜಯ್ ಪುಣ್ಕೆದಡಿ ಅವರು ಆಕಸ್ಮಿಕವಾಗಿ ಸಾವನ್ನಪ್ಪಿದರು.


ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ತೀರ್ಮಾನಿಸಿದಂತೆ ಅವರ ಕುಟುಂಬಕ್ಕೆ ದಾನಿಗಳ ಸಹಕಾರದಿಂದ ಮನೆಯನ್ನು ನಿರ್ಮಿಸಿ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮಿಜೀಯವರ ಹಾಗೂ ಸಂಘಟನೆಯ ಪ್ರಮುಖರ ಮತ್ತು ಊರ ಪ್ರಮುಖರ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಯಿತು. ವಾಸ್ತು ಹೋಮ, ಗಣಹೋಮ, ಸತ್ಸಂಗ, ಗೋಪೂಜೆ, ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಮೂಲಕ ಸ್ಥಳದಾನ ಮಾಡಿದ ತಿಂಗಳಾಡಿಗುತ್ತು ಶ್ರೀ ಸೀತಾರಾಮ ಪೂಜಾರಿ ಹಾಗೂ ಮನೆ ನಿರ್ಮಾಣಕ್ಕೆ ಸಹಾಕರಿಸಿದ ಶ್ರೀ ಸತೀಶ್ ಶೆಟ್ಟಿ ಕದ್ರಿ ಇವರನ್ನು ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸತ್ಸಂಗ ಪ್ರಮುಖ್ ಕಶೆಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ ಬಜರಂಗದಳದ ಸಂಯೋಜಕ್ ಭರತ್ ಕುಮ್ಡೇಲ್, ಪ್ರಮುಖರಾದ ಪ್ರಸಾದ್ ಕುಮಾರ್ ರೈ, ಅಶೋಕ್ ಶೆಟ್ಟಿ ಸರಪಾಡಿ, ಸಂತೋಷ್ ಸರಪಾಡಿ, ಶಿವಪ್ರಸಾದ್ ತುಂಬೆ, ಸಂದೇಶ್ ಶೆಟ್ಟಿ ಮಾಲಕರು ಅಗ್ರಜ ಬಿಲ್ಡರ್ಸ್, ದೇವಪ್ಪ ಪೂಜಾರಿ ಬಾಳಿಕೆ, ರಂಜಿತ್ ಮೈರ, ಪ್ರಶಾಂತ್ ಕೊಟ್ಟಾರಿ ಪೂಪಾಡಿಕಟ್ಟೆ, ಶಾಂತಪ್ಪ ಪೂಜಾರಿ ಹಟದಡ್ಕ, ಸಂಜೀವ ಪೂಜಾರಿ ಗುರುಕೃಪಾ, ಸಾಯಿಶಾಂತಿ ಕೊಕಲ, ಜಯರಾಮ ಅಡಪ, ಪುರುಷೋತ್ತಮ ಪೂಜಾರಿ ಮಜಲು, ಪೂವಪ್ಪ ಕಡಮಾಜೆ, ನಾಗರಾಜ್ ಕುಟ್ಟಿಕಳ ಹಾಗೂ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.




