ಉಡುಪಿ: ಭೀಕರ ಕಾರು ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.21ರಂದು ತಡರಾತ್ರಿ ನಡೆದಿದೆ.


ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ತಲಿನೋ ಅವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ (22) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಲೆಸ್ಟನ್ ಪಿಂಟೊ (22), ಜಸ್ಟಿನ್ ಕಾರ್ಡೋಜಾ (22), ವಿಲ್ಸನ್ ಮಾರ್ಟಿಸ್ (23) ಮತ್ತು ಗ್ಲಾಡೆನ್ ಡಿಸಿಲ್ವಾ (23) ಗಾಯಗೊಂಡಿದ್ದಾರೆ. ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದರ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾರಿನಲ್ಲಿದ್ದವರು ಉದ್ಯಾವರದ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದು ಬಂದಿದೆ.




