ಬೈಕ್ ಅಪಘಾತದಲ್ಲಿ ರಂಗಭೂಮಿ ಕಲಾವಿದ ಸಾವು

Share with

ಬಂಟ್ವಾಳ: ಪುಂಜಾಲಕಟ್ಟೆ ಬಳಿ ನಡೆದ ಬೈಕ್ ಅಪಘಾತದಲ್ಲಿ ರಂಗಭೂಮಿ ಕಲಾವಿದ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ರಂಗಭೂಮಿ ಕಲಾವಿದ ಬಂಟ್ವಾಳ ತಾಲೂಕಿನ ದೇವಶ್ಯಪಡೂರು ಗ್ರಾಮದ ಮರದೊಟ್ಟು ನಿವಾಸಿ ಗೌತಮ್ (26) ಎಂದು ಗುರುತಿಸಲಾಗಿದೆ.

ಮೂಡುಬಿದಿರೆ ಪಿಂಗಾರ ಕಲಾವಿದೆರ್ ತಂಡದ ಕಲಾವಿದರಾಗಿದ್ದ ಅವರು ಡಿ.30 ರಂದು ಬೆಳುವಾಯಿಯಲ್ಲಿ ನಾಟಕ ಮುಗಿಸಿ ತಡರಾತ್ರಿ ಸುಮಾರು 3ಗಂಟೆಯ ಹೊತ್ತಿಗೆ ಮನೆಗೆ ಹಿಂತಿರುಗುತ್ತಿರುವಾಗ ಅವರ ಸ್ಕೂಟರ್ ಮನೆಯ ಸಮೀಪ ಮರವೊಂದಕ್ಕೆ ಢಿಕ್ಕಿಯಾಗಿ ಗೌತಮ್ ಅವರ ತಲೆಗೆ ಏಟಾಗಿ ರಸ್ತೆಗೆ ಬಿದ್ದಿದ್ದರು. ಬೆಳಗ್ಗೆಯಷ್ಟೆ ಘಟನೆ ಬೆಳಕಿಗೆ ಬಂದಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಅವಿವಾಹಿತರಾಗಿದ್ದ ಗೌತಮ್ ಅವರು ಬಿ.ಸಿ ರೋಡ್ ನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಮೃತರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *