ಹಿರಿಯ ನಟಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್​ ರಾಜ್​ ಕುಟುಂಬ

Share with

ಬೆಂಗಳೂರು: ಬಹುಭಾಷಾ ಹಿರಿಯ ನಟಿ ಲೀಲಾವತಿ ಅವರು ಕಳೆದ ವರ್ಷ ಡಿಸೆಂಬರ್​ 8ರಂದು ನಿಧನರಾಗಿದ್ದರು. ಜ.14ರಂದು ನೆಲಮಂಗಲದ ತೋಟದ ಮನೆಯ ಬಳಿ ಲೀಲಾವತಿ ಅವರ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಗುದ್ದಲಿ ಪೂಜೆಯನ್ನು ನೆರವೇರಿಸಿದ್ದಾರೆ.

ಹಿರಿಯ ನಟಿ ಲೀಲಾವತಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್​ ರಾಜ್​ ಕುಟುಂಬ

ಪೂಜೆಯಲ್ಲಿ ವಿನೋದ್​ ರಾಜ್​, ಪತ್ನಿ ಅನು ಹಾಗೂ ಪುತ್ರ ಯುವರಾಜ್​ ಭಾಗಿಯಾಗಿದ್ದರು. ಗುದ್ದಲಿ ಪೂಜೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಿನೋದ್ ರಾಜ್ ಅವರು, ಲೀಲಾವತಿ ಅವರ ಸ್ಮಾರಕ 55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಪೂಜೆಯಲ್ಲಿ ವಿನೋದ್​ ರಾಜ್​, ಪತ್ನಿ ಅನು ಹಾಗೂ ಪುತ್ರ ಯುವರಾಜ್​ ಭಾಗಿಯಾಗಿದ್ದರು.

ಅವರ ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದವರೆಗೆ ಗ್ಯಾಲರಿಯನ್ನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ತಾಯಿಯ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ಅಪೇಕ್ಷೆ, ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್‌ ಮುನಿಯಪ್ಪ ಅವರು ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *