ಕಾಸರಗೋಡು: ಬುಧವಾರ(ಜು.1) ಸುರಿದ ಭಾರೀ ಮಳೆಗೆ ಮಂಗಲ್ಪಾಡಿ ಪಂಚಾಯತ್‌ನ ಶಿರಿಯಾ ವಾರ್ಡ್ ನಿವಾಸಿ ತಿರುಮಲೇಶ್ ಎಂಬುವವರ ಮನೆ ಕುಸಿದಿದ್ದು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್, ಜಿಲ್ಲಾ ಉಪಾಧ್ಯಕ್ಷ ರಮೇಶ್, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಕಿಶೋರ್ ಕುಮಾರ್, ವಿನು ಮತ್ತು ಭರತ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನದ ವೇಳೆಗೆ ಹಂಚಿನ ಮನೆಯ ಮೇಲ್ಛಾವಣಿಯು ಭಾರಿ ಸದ್ದಿನೊಂದಿಗೆ ಕುಸಿದು ಬಿದ್ದಿದೆ. ವಯೋಸಹಜ ಕಾಯಿಲೆಗಳಿಂದಾಗಿ ದೃಷ್ಟಿ ಕಳೆದುಕೊಂಡಿರುವ ತಿರುಮಲೇಶ್ ಅವರ ತಾಯಿ ಭಾಗೀರಥಿ, ಪತ್ನಿ ಸುಶ್ಮಿತಾ, ಮಗಳು ಸಾತ್ವಿಕಾ ಮತ್ತು ತಿರುಮಲೇಶ್ ಅವರು ಘಟನೆಯ ಸಮಯದಲ್ಲಿ ಮನೆಯ ಒಳಗಡೆಯೇ ಇದ್ದರು. ಅದೃಷ್ಟವಶಾತ್ ಕುಟುಂಬದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.




