ಇನ್ಮುಂದೆ ಕೇದರನಾಥದಲ್ಲಿ ಮೊಬೈಲ್ ನಿಷೇಧ ! ದೇವಸ್ಥಾನ ಸಮಿತಿ ನಿರ್ಧಾರದ ಹಿಂದಿದೆ ಈ ಘಟನೆ..

Share with

ಕೇದಾರನಾಥ: ಉತ್ತರಾಖಂಡದಲ್ಲಿರುವ ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಮೊಬೈಲ್ ಬಳಕೆಯ ಮೇಲೆ ನಿರ್ಬಂಧ ಹೆರಲಾಗಿದೆ. ಈ ನಿರ್ಣಯವನ್ನು ಬದ್ರಿ-ಕೇದಾರನಾಥ ದೇವಸ್ಥಾನ ಸಮಿತಿಯು ತೆಗೆದುಕೊಂಡಿದ್ದು, ಇಲ್ಲಿ ಮೊಬೈಲ್ ನ ಮೂಲಕ ಛಾಯಾಚಿತ್ರಗಳನ್ನು ತೆಗೆಯುವುದು, ವಿಡಿಯೋ ನಿರ್ಮಿಸುವುದರ ಮೇಲೆ ನಿರ್ಬಂಧ ಹೇರಿದ್ದಾರೆ.

ಕೆಲವು ದಿನಗಳ ಹಿಂದೆ ಓರ್ವ ಮಹಿಳೆಯು ಈ ದೇವಸ್ಥಾನದ ಪರಿಸರದಲ್ಲಿ ಆಕೆಯ ಪ್ರಿಯಕರನಿಗೆ ವಿವಾಹಕ್ಕಾಗಿ ಮನವಿ ಮಾಡಿದ್ದಳು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ದೇವಸ್ಥಾನದ ಅಡಳಿತವು ಬೇಸರ ವ್ಯಕ್ತಪಡಿಸಿತ್ತು.

ದೇವಸ್ಥಾನ ಸಮಿತಿಯು ತೆಗೆದುಕೊಂಡ ನಿರ್ಣಯದಲ್ಲಿ ಭಾವಿಕರು ದೇವಸ್ಥಾನಕ್ಕೆ ಸಭ್ಯ ಉಡುಪುಗಳನ್ನು ಧರಿಸಿ ಬರಬೇಕೆಂದು ಹೇಳಲಾಗಿದೆ. ಇದರೊಂದಿಗೆ ದೇವಸ್ಥಾನದ ಪರಿಸರದಲ್ಲಿ ಡೇರೆ ಅಥವಾ ಛಾವಣಿಗಳನ್ನು ನಿರ್ಮಿಸದಿರಲು ಸೂಚಿಸಲಾಗಿದೆ. ಆದೇಶವನ್ನು ಪಾಲಿಸದಿರುವವರ ಮೇಲೆ ಕಾನೂನಾತ್ಮಕ ಕಾರ್ಯಾಚರಣೆ ನಡೆಸಲಾಗುವುದು. ದೇವಸ್ಥಾನದ ಪರಿಸರದಲ್ಲಿ ವಿವಿಧ ಕಡೆಗಳಲ್ಲಿ ಈ ಕುರಿತು ಪೋಸ್ಟರ್‌ಗಳನ್ನು ಹಾಕಲಾಗಿದ್ದು, ಇದರಲ್ಲಿ `ನೀವು ಸಿಸಿಟಿವಿಯ ಕಣ್ಗಾವಲಿನಲ್ಲಿದ್ದೀರಿ’ ಎಂದು ಹೇಳಲಾಗಿದೆ.


Share with

Leave a Reply

Your email address will not be published. Required fields are marked *