ಬೆಂಗಳೂರು: ಬಿಗ್ ಬಾಸ್ ಕನ್ನಡ -12 (Bigg Boss Kannada -12) ಮನೆಗೆ ಸ್ಪರ್ಧಿಯಾಗಿ ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಅವರು ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ರಕ್ಷಿತಾ ಅವರು ಯಾಕೆ ಬಿಗ್ ಬಾಸ್ ಬಂದಿದ್ದಾರೆ ಎನ್ನುವುದರ ಕುರಿತ ಪ್ರೋಮೋವನ್ನು ರಿಲೀಸ್ ಮಾಡಲಾಗಿದೆ.
ಏಡಿಯ ಪದಾರ್ಥವನ್ನು ಮಾಡುತ್ತಾ ರಕ್ಷಿತಾ ಅವರು ತನ್ನ ಬಾಲ್ಯದ ದಿನಗಳನ್ನು ನೆನೆದಿದ್ದಾರೆ. “ನಾನು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ. ವರ್ಷಕ್ಕೊಮ್ಮೆ ಸಿಗುವ ರಜಾ ದಿನಗಳಲ್ಲಿ ಮಂಗಳೂರಿಗೆ ಬರುತ್ತೇನೆ. ನಾನು ಬರುವ ಸಂದರ್ಭದಲ್ಲಿ ಕೋವಿಡ್ ಇತ್ತು. ಆಗಾಗ ನಾನು ಊರಿನಲ್ಲಿ ಕಾಡಿನಲ್ಲಿ ಫೂಟ್ಸ್‌ಗಳನ್ನು ತಿನ್ನುತ್ತಿದ್ದೆ. ಅದೇ ಖುಷಿಯ ಕ್ಷಣವನ್ನು ನಾನು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದೆ. ಅದು ವೈರಲ್ ಆಯಿತು” ಎಂದಿದ್ದಾರೆ.
“ನಾನು ತುಳು ಕುಟುಂಬದಿಂದ ಬಂದಿದ್ದೇನೆ. ಇಲ್ಲಿ ಎಲ್ಲರೂ ತುಳುವಿನಲ್ಲಿ ಮಾತನಾಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ನನಗೆ ಕನ್ನಡ ಕಲಿಯುವ ಅನುಭವ ಸಿಗುತ್ತದೆ. ಅಲ್ಲಿ ನನಗೆ ಕನ್ನಡ ಮಾತನಾಡೋಕೆ ಸಿಗುತ್ತದೆ. ಬಿಗ್ ಬಾಸ್‌ನಲ್ಲಿ ಹೇಗೆ ಇರಬೇಕೆನ್ನುವ ಬಗ್ಗೆ ಸ್ಕ್ಯಾನ್ ಇಲ್ಲ. ಅಲ್ಲಿ ಆಡುವುದ್ದಷ್ಟೇ. ಜೈ ತುಳುನಾಡು, ಜೈ ಕರ್ನಾಟಕ ಎಂದಿದ್ದಾರೆ.
ಯಾರು ಈ ರಕ್ಷಿತಾ?
ತುಳು – ಕನ್ನಡ ಬ್ಲಾಗ್ಸ್ ಹಾಗೂ ಕಂಟೆಂಟ್ ಮೂಲಕ ಮಂಗಳೂರು ಉಡುಪಿ ಭಾಗದಲ್ಲಿ ಸಖತ್ ಫೇಮಸ್ ಆಗಿರುವ ರಕ್ಷಿತಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್‌ಗಳಿದ್ದಾರೆ.
ಇನ್ಸಾಗ್ರಾಮ್‌ನಲ್ಲಿ ಅವರಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. ಮಂಗಳೂರು ಭಾಗದಲ್ಲಿ ಜನಪ್ರಿಯರಾಗಿರುವ ರಕ್ಷಿತಾ ಅವರನ್ನು ಬಿಗ್ ಬಾಸ್ ಮನೆಗೆ ಸುದೀಪ್ ಅವರು ವೆಲ್‌ಕಂ ಮಾಡಿದ್ದಾರೆ.
ಅವರ ಅಡುಗೆಯ ವಿಚಾರವನ್ನು ಪ್ರಸ್ತಾಪಿಸಿ ಕಿಚ್ಚ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ಕಿಚ್ಚ ಅವರು ರಕ್ಷಿತಾ ಅವರ ಮೀನು ರೆಸೆಪಿಯನ್ನು ಕೇಳಿದ್ದಾರೆ. ಇದಕ್ಕೆ ರಕ್ಷಿತಾ ಅವರು ತನ್ನದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಮೂಲತಃ ತುಳುನಾಡಿನವರಾದ ರಕ್ಷಿತಾ ಮುಂಬಯಿಯಲ್ಲಿ ಬೆಳದವರು. ಕೋವಿಡ್ ಸಂದರ್ಭದಲ್ಲಿ ಮಂಗಳೂರಿಗೆ ಬಂದು, ಇಲ್ಲಿ ಸ್ನೇಹಿತರ ಜತೆ ಹಾಸ್ಯಮಯ ವಿಡಿಯೋಗಳನ್ನು ಮಾಡುತ್ತಾ ಜನಪ್ರಿಯರಾದವರು. ‘ಬಲೆ ಬಲೆ ಗೈಯ್ಸ್’ ಸೇರಿದಂತೆ ಅವರ ಹಲವು ಡೈಲಾಗ್‌ಗಳು ಟ್ರೋಲ್ ಆಗುವುದರ ಜತೆಗೆ ಅವರನ್ನು ಫೇಮ್ ತಂದುಕೊಟ್ಟಿತು.




