ಕಾಸರಗೋಡು: ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಹಾಗೂ ಶ್ರೀ ಭಗವತೀ ಕೃಪ ವೀರಾಂಜನೇಯ ವ್ಯಾಯಾಮ ಶಾಲೆ ಅಡ್ಕ ಭಗವತೀ ನಗರ ಇದರ ಆಶ್ರಯದಲ್ಲಿ ಮಾಸಿಕ ಸರಣಿ ತಾಳಮದ್ದಳೆಯ ಪ್ರಯುಕ್ತ ʼಶ್ರೀ ರಾಮ ಪಟ್ಟಾಭಿಷೇಕʼ ಕಥಾಭಾಗ ಜು.23 ರಂದು ಅಡ್ಕ ಭಗವತೀ ನಗರದ ಭಗವತೀ ಕೃಪ ವೀರಾಂಜನೇಯ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಪ್ರಸ್ತುತಗೊಂಡಿತು.
ಸಭಾ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದ ಕೆ. ನರಸಿಂಹ ಬಲ್ಲಾಳ್ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ಜನಾರ್ದನ ಭಗವತೀ ನಗರ, ಶ್ರೀ ಭಗವತೀ ಕೃಪ ವೀರಾಂಜನೇಯ ವ್ಯಾಯಾಮ ಶಾಲಾ ಸ್ಥಾಪಕ ಸದಸ್ಯ ಜಯರಾಮ ಭಾಗಿಯಾಗಿದ್ದರು.