ನಟನೆಯಲ್ಲಿ ಸೈ ಎನಿಸಿಕೊಂಡ ಸುನಿಲ್‌ ಆಂತೋನಿ ಸಿದ್ದಿ

Share with

ತುಳು, ಕನ್ನಡ, ಕೊಂಕಣಿ, ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಸುನಿಲ್‌ ಅಂತೋನಿ ಸಿದ್ದಿ.

ಮಂಗಳೂರು: ತುಳು, ಕನ್ನಡ, ಕೊಂಕಣಿ, ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಸುನಿಲ್‌ ಅಂತೋನಿ ಸಿದ್ದಿಯವರು ಮೂಲತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದವರಾಗಿದ್ದು, ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಸಿದ್ಧಿ ಬೈರನ ಪಾತ್ರದಲ್ಲಿ ನಟಿಸಿದ ಆಂತೋನಿ ಸಿದ್ಧಿಯವರ ದ್ವಿತೀಯ ಪುತ್ರರಾಗಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಸಿಕ್ಕ ಅವರು ಚಿತ್ರರಂಗದ ಆಸಕ್ತಿಯ ಬಗ್ಗೆ ಮಾತನಾಡಿ ‘ಮಾಂಡ್‌ ಸೂಭಾಣ್‌ ಸಂಸ್ಥೆಯ ಗುರಿಕಾರರಾದ ಎರಿಕ್‌ ಒಝೇರಿಯೊ ಅವರ ಪ್ರೋತ್ಸಾಹದಿಂದ, ಕಲಾ-ಕುಲ್‌ ರಂಗ ಅಧ್ಯಯನ ಕೇಂದ್ರದಲ್ಲಿ ನಿನಾಸಂ ಪದವೀಧರರಾದ ಕ್ರಿಸ್ಟೋಫರ್‌ ನಿನಾಸಂ ಅವರಿಂದ ತರಬೇತಿಯನ್ನು ಪಡೆದುಕೊಂಡಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು ನಟನಾ ರಂಗದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

ಇವರು ಅಭಿನಯಿಸಿದ ಕೊಂಕಣಿ ʼಅಸ್ಮಿತಾಯ್‌ʼ ಚಿತ್ರವು ತೆರೆಕಂಡಿದ್ದು, ಈ ಚಿತ್ರದಲ್ಲಿ ʼತುಕ್ರಾʼ ಎಂಬ ಮನೆ ಕೆಲಸದವನಾಗಿ ಪಾತ್ರವನ್ನು ನಿರ್ವಹಿಸಿದ್ದು, ಚಿತ್ರವು ಅತ್ಯುತ್ತಮ ಪ್ರದರ್ಶನವನ್ನು ಕಾಣುತ್ತಾ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇವರು ಕನ್ನಡದ 21 ಚಿತ್ರಗಳಲ್ಲಿ, ತುಳುವಿನ 2 ಚಿತ್ರಗಳಲ್ಲಿ, ಕೊಂಕಣಿಯ 1 ಚಿತ್ರ, ಮರಾಠಿಯ 1 ಚಿತ್ರ, ಹಿಂದಿಯ 2 ಚಿತ್ರಗಳಲ್ಲಿ ಹಾಗೂ ತಮಿಳಿನ 1 ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇಷ್ಟೇ ಅಲ್ಲದೇ ಕಿರು ಚಿತ್ರಗಳು, ಅಲ್ಬಮ್‌ ಸಾಂಗ್‌ ಮತ್ತು 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಕನ್ನಡದ ನಟರಾದಂತಹ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌, ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು‌ ನಟ ಡಾಲಿ ಧನಂಜಯ್‌, ತಮಿಳಿನ ನಟರಾದ ಯೋಗಿ ಬಾಬು ಮತ್ತು ಅರ್ಜುನ್‌ ದಾಸ್‌ ಹಾಗೂ ತೆಲುಗು ನಟರಾದ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ನಟಿಸಿದ ಹೆಗ್ಗಳಿಕೆ ಇವರದ್ದು.

ಅಪ್ಪು ಅವರ ಅಪ್ಪಟ ಅಭಿಮಾನಿಯಾದ ಇವರ ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ಸಿಯೋನ್ ಅಪ್ಪು ಹಾಗೂ ಇನ್ನೊಬ್ಬನಿಗೆ ಶೆಲ್ಡನ್ ಪುನೀತ್‌ ಎನ್ನುವ ಹೆಸರನ್ನು ಇಟ್ಟಿದ್ದೇನೆ ಎಂದು ಅಭಿಮಾನದಿಂದ ಹೇಳಿಕೊಂಡರು.


Share with

Leave a Reply

Your email address will not be published. Required fields are marked *