ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾರ ಪಾರ್ಥಿವ ಶರೀರವು ರಾತ್ರಿ 11.20ಕ್ಕೆ ಬೆಂಗಳೂರಿಗೆ ತಲುಪಲಿದೆ ಎಂಬ ಮಾಹಿತಿ ಲಭಿಸಿದೆ.
ಮೃತದೇಹವನ್ನು ಹೊತ್ತ ಥಾಯ್ ಏರ್ ವೇಸ್ ಸಂಸ್ಥೆಯ ವಿಶೇಷ ವಿಮಾನವು ಈಗಾಗಲೇ ಸುವರ್ಣ ಭೂಮಿ ಏರ್ಪೋರ್ಟ್ ನಿಂದ ಹೊರಟಿದೆ. ಇದೇ ವಿಮಾನದಲ್ಲೇ ನಟ ವಿಜಯ್ ರಾಘವೇಂದ್ರ ಹಾಗೂ ಇತರೆ ಸಂಬಂಧಿಕರೂ ಆಗಮಿಸುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಪಂದನಾರ ಮೃತದೇಹವನ್ನು ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.