
ಉಡುಪಿ: ಬಾಲರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಉಡುಪಿ ನಗರದ ಆಟೋ ಚಾಲಕ ಮಾಲಕರು ಸಂಭ್ರಮಾಚರಣೆ ನಡರಸಿದರು.
ಸಂಭ್ರಮಾಚರಣೆ ಭಾಗವಾಗಿ ಇಂದು ಉಚಿತ ಆಟೋ ಸೇವೆ ಸಲ್ಲಿಸುತ್ತಿದ್ದಾರೆ.ನಗರದ
ಕೋರ್ಟ್ ಹಿಂಭಾಗದ ಆಟೋ ಚಾಲಕ ಮಾಲಕರ ಸಂಘದಿಂದ ಈ ಉಚಿತ ಸೇವೆ ನಡೆಯುತ್ತಿದೆ.
ಇಂದು ಸಂಜೆ ಆರು ಗಂಟೆ ತನಕ ಪ್ರಯಾಣಿಕರಿಗೆ ಫ್ರೀ ಸರ್ವಿಸ್ ಸಿಗಲಿದೆ. ಈ ಕುರಿತು ಮಾತನಾಡಿದ ಆಟೋ ಚಾಲಕ ,ಮಾಲಕರು ಸ್ವಯಂಪ್ರೇರಿತರಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ.
ಜನರು ಈ ಉಚಿತ ಸೇವೆಯ ಉಪಯೋಗ ಪಡೆದುಕೊಳ್ಳಬೇಕು
ಎಂದು ಹೇಳಿದ್ದಾರೆ.ಉಚಿತ ಸೇವೆ ಉದ್ಘಾಟನೆ ಸಂದರ್ಭ ಆಟೋ ಚಾಲಕ ಮಾಲಕರು ಜೈಶ್ರೀರಾಮ್ ಘೋಷಣೆ ಕೂಗಿದರು.





