ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಜ.21ರಂದು ಪ್ರಾರಂಭವಾಗಿದ್ದು ಜ.26ರ ವರೆಗೆ ನಡೆಯಲಿದೆ.


ಈ ಮಹೋತ್ಸವದ ಸುಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಹಾಗೂ ಉಳ್ಳಾಲ ವಿಧಾನ ಸಭೆಯ ಶಾಸಕ ಯು.ಟಿ ಖಾದರ್ ಅವರು ಬಸಿಲಿಕಾದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸ್ ರ ದರ್ಶನ ಪಡೆದು ಮೊಂಬತ್ತಿ ಬೆಳಗಿಸುವುದರ ಮೂಲಕ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಬಸಿಲಿಕಾದ ನಿರ್ದೇಶಕರಾದ ಅ.ವಂ.ಫಾ.ಆಲ್ಬನ್ ಡಿಸೋಜಾ ಅವರು ಯು.ಟಿ.ಖಾದರ್ ಅವರನ್ನು ಸ್ವಾಗತಿಸಿ, ಶಾಲು ಹೊದಿಸಿ ಗೌರವದೊಂದಿಗೆ ಸನ್ಮಾನಿಸಿದರು.




