ಅಯೋಡಿನ್ ಕೊರತೆ ಗೋಯಿಟರ್, ಹೈಪೋಥೈರಾಯ್ಡಿಸಂ ಅಪಾಯಕ್ಕೆ ಕಾರಣವಾಗುತ್ತದೆಯೇ?
ಅಯೋಡಿನ್ ಯುಕ್ತ ಉಪ್ಪು ಬಳಸುವುದು ಏಕೆ ಮುಖ್ಯ? ಆರೋಗ್ಯ ತಜ್ಞರು ಹೇಳುವ ಕಾರಣಗಳು
ಅಯೋಡಿನ್ ಕೊರತೆಯ ಲಕ್ಷಣಗಳು ಯಾವುವು? ಥೈರಾಯ್ಡ್ ಸಮಸ್ಯೆಗೆ ಇದು ಪ್ರಮುಖ ಕಾರಣವೇ?
ದೇಹದ ಆರೋಗ್ಯವನ್ನು ಕಾಪಾಡಲು ವಿಟಮಿನ್‌ಗಳಷ್ಟೇ ಅಲ್ಲ, ಖನಿಜಾಂಶಗಳೂ (Minerals) ಅತ್ಯಗತ್ಯ. ಅವುಗಳಲ್ಲಿ ಅಯೋಡಿನ್ (Iodine) ಪ್ರಮುಖವಾದ ಖನಿಜವಾಗಿದೆ. ಇದು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಅಗತ್ಯವಾಗಿದ್ದು, ದೇಹದ ಚಯಾಪಚಯ (Metabolism), ಶಕ್ತಿ ಉತ್ಪಾದನೆ, ಮೆದುಳಿನ ಬೆಳವಣಿಗೆ ಹಾಗೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ದೈಹಿಕ-ಮಾನಸಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಯೋಡಿನ್ ಕೊರತೆಯನ್ನು ಆರಂಭದಲ್ಲಿ ಹಲವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೀರ್ಘಕಾಲ ಇದರ ಕೊರತೆ ಇದ್ದರೆ ಗೋಯಿಟರ್ (Goiter), ಹೈಪೋಥೈರಾಯ್ಡಿಸಂ (Hypothyroidism) ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳು ಅಯೋಡಿನ್ ಕೊರತೆಯಿಂದ ಹೆಚ್ಚು ಪರಿಣಾಮಕ್ಕೊಳಗಾಗುವ ಸಾಧ್ಯತೆ ಇದೆ. ಹಾಗಾದರೆ ಅಯೋಡಿನ್ ಕೊರತೆಯ ಲಕ್ಷಣಗಳೇನು, ಯಾವ ಆಹಾರಗಳಲ್ಲಿ ಇದು ಸಿಗುತ್ತದೆ? ಯಾರಿಗೆ ಹೆಚ್ಚು ಅಪಾಯ? ಇಲ್ಲಿದೆ ಸಂಪೂರ್ಣ ಮಾಹಿತಿ.
ಅಯೋಡಿನ್ ಕೊರತೆಯಿಂದ ದೇಹದ ಮೇಲಾಗುವ ಪರಿಣಾಮ:
ಅಮೆರಿಕದ MedlinePlus ಮಾಹಿತಿಯ ಪ್ರಕಾರ, ಅಯೋಡಿನ್ ಕೊರತೆಯಾದರೆ ದೇಹವು ಸಾಕಷ್ಟು ಪ್ರಮಾಣದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ.
ಇದರ ಪರಿಣಾಮವಾಗಿ:
ಗೋಯಿಟರ್ (Goiter) ಥೈರಾಯ್ಡ್ ಗ್ರಂಥಿ ದೊಡ್ಡದಾಗುವುದು
ಹೈಪೋಥೈರಾಯ್ಡಿಸಂ ಉಂಟಾಗುವ ಸಾಧ್ಯತೆ
ದೇಹದ ಚಯಾಪಚಯ ನಿಧಾನಗೊಳ್ಳುವುದು
ಶಕ್ತಿ ಕುಸಿತ ಮತ್ತು ದಣಿವು
ತೂಕ ಹೆಚ್ಚಾಗುವುದು
ಚಳಿಯ ಅನುಭವ
ಅಯೋಡಿನ್ ಕೊರತೆಯ ಪ್ರಮುಖ ಲಕ್ಷಣಗಳು
ಕುತ್ತಿಗೆಯ ಮುಂಭಾಗದಲ್ಲಿ ಊತ
ನಿರಂತರ ದಣಿವು
ದೇಹದಲ್ಲಿ ದುರ್ಬಲತೆ
ತೂಕ ಹೆಚ್ಚಾಗುವುದು
ಚಳಿ ಹೆಚ್ಚು ಅನುಭವಿಸುವುದು
ಒಣ ಚರ್ಮ
ಕೂದಲು ಉದುರುವುದು
ಮಲಬದ್ಧತೆ
ಏಕಾಗ್ರತೆಯ ಕೊರತೆ
ಮಕ್ಕಳಲ್ಲಿ ಬೆಳವಣಿಗೆ ನಿಧಾನವಾಗುವುದು
ಇದನ್ನೂ ಓದಿ: 70% ಕೋಕೋ ಇರುವ ಡಾರ್ಕ್ ಚಾಕೊಲೇಟ್ ಏಕೆ ಒಳ್ಳೆಯದು? ವೈದ್ಯರು ಹೇಳಿರುವ ಮಾಹಿತಿ ಇಲ್ಲಿದೆ
ಅಯೋಡಿನ್ ಏಕೆ ಮುಖ್ಯ?
ದೇಹದ ಚಯಾಪಚಯ ನಿಯಂತ್ರಿಸುತ್ತವೆ
ಹೃದಯದ ಬಡಿತದ ಮೇಲೆ ಪರಿಣಾಮ ಬೀರುತ್ತವೆ
ದೇಹದ ತಾಪಮಾನವನ್ನು ನಿಯಂತ್ರಿಸುತ್ತವೆ
ಮೆದುಳಿನ ಬೆಳವಣಿಗೆಗೆ ನೆರವಾಗುತ್ತವೆ
ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ
ಅಯೋಡಿನ್ ಸಮೃದ್ಧ ಆಹಾರಗಳು ಯಾವುವು?
ಅಯೋಡಿನ್ ಯುಕ್ತ ಉಪ್ಪು
ಹಾಲು
ಮೊಸರು
ಪನ್ನೀರ್
ಮೊಟ್ಟೆ
ಸಮುದ್ರ ಮೀನು
ಸಮುದ್ರ ಆಹಾರ (Seafood)





