ಬೈಂದೂರು: ಬೀಚ್ ಸ್ವಚ್ಛತೆ ಮಾಡಿದ್ದ ದಂಪತಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ

Share with

ಬೈಂದೂರು: ಬೈಂದೂರಿನ ಅನುದೀಪ್‌ ಹಾಗೂ ಮಿನುಷಾ ದಂಪತಿಗೆ ಈ ವರ್ಷ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಕಚೇರಿಯಿಂದ ಆಹ್ವಾನ ಬಂದಿದೆ.

ಬೈಂದೂರಿನ ಅನುದೀಪ್‌ ಹಾಗೂ ಮಿನುಷಾ ದಂಪತಿ

ಕೆಲ ವರ್ಷಗಳ ಹಿಂದೆ ಇವರಿಬ್ಬರ ವಿವಾಹವಾಗಿದ್ದು, ಎಲ್ಲರಂತೆ ದೂರದ ಪ್ರವಾಸಿ ತಾಣಗಳಿಗೆ ತೆರಳಿ ಮಧುಚಂದ್ರ ಆಚರಿಸುವ ಬದಲು ಬೈಂದೂರಿನ ಸೋಮೇಶ್ವರ ಬೀಚ್‌ ಸ್ವಚ್ಛತೆ ಮಾಡುವ ಮೂಲಕ ಗುರುತಿಸಿಕೊಂಡಿದ್ದರು. ಈ ವಿಚಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದು ಅವರು ತಮ್ಮ ಮನ್‌ ಕೀ ಬಾತ್‌ನಲ್ಲಿ ಈ ದಂಪತಿಯ ಉಲ್ಲೇಖ ಮಾಡಿದ್ದರು.


Share with

Leave a Reply

Your email address will not be published. Required fields are marked *