ಉಡುಪಿ: ಸಚಿವ ಶಿವರಾಜ್ ತಂಗಡಗಿ ಜಿಲ್ಲೆಗೆ ಬಂದರೆ ತಡೆಯುತ್ತೇವೆ: ಬಿಜೆಪಿ ಯುವ ಮೋರ್ಚಾ

Share with

ಉಡುಪಿ: ‘ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಹೇಳುವ ಯುವಕರ ಕಪಾಳಕ್ಕೆ ಹೊಡೆಯಿರಿ’ ಎಂದು ಹೇಳಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.

ಸಚಿವ ಶಿವರಾಜ್ ತಂಗಡಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.

ಪೃಥ್ವಿರಾಜ್ ಶೆಟ್ಟಿ ನೇತೃತ್ವದ ಬಿಜೆಪಿ ಯುವ ಮೋರ್ಚಾ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು.

ಬಳಿಕ ಮಾತನಾಡಿದ ಪೃಥ್ವಿರಾಜ್ ಶೆಟ್ಟಿ, ಸಚಿವ ತಂಗಡಗಿ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬಾರದು. ಚುನಾವಣೆಯ ಸಂದರ್ಭ ಪ್ರಚಾರಕ್ಕೆ ಬಂದರೆ ನಾವು ಅವರನ್ನು ತಡೆಯುತ್ತೇವೆ. ತಂಗಡಗಿ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಜಿಲ್ಲೆಯ ಐದೂ ತಾಲೂಕಿನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡುತ್ತದೆ.ನರೇಂದ್ರ ಮೋದಿ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ, ಅವರು ಇಡೀ ದೇಶಕ್ಕೆ ಪ್ರಧಾನಿ, ತಂಗಡಗಿ ಕೀಳು ಮಟ್ಟದ ಹೇಳಿಕೆ ಕೊಡಬಾರದಿತ್ತು, ಅವರು ಕ್ಷಮೆ ಕೇಳಬೇಕು ಎಂದರು.


Share with

Leave a Reply

Your email address will not be published. Required fields are marked *