ಮೊಬೈಲ್​ ಜಾಸ್ತಿ ನೋಡಬೇಡ ಎಂದ ಪೋಷಕರು, ಮುಂದೆ ನಡೆದಿದ್ದಾದರೂ ಏನು ?

Share with

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಬಾಲಕಿ ಜಲಪಾತಕ್ಕೆ ಹಾರಿದ ಘಟನೆ ಛತ್ತೀಸ್ ಘರ್ ನಲ್ಲಿ ನಡೆದಿದೆ. ಅಲ್ಲಿದ್ದವರು ಎಷ್ಟೇ ಕೂಗಿಕೊಂಡರೂ ಈಕೆ ಲೆಕ್ಕಿಸದೇ 90 ಅಡಿಯಿಂದ ಧುಮುಕಿದ್ದಾಳೆ. ಪೋಷಕರು ಗದರಿದ್ದಕ್ಕೆ ಈಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದನ್ನು ಪೊಲೀಸರು ಸಾಬೀತುಪಡಿಸಿದ್ದಾರೆ. ಅದೃಷ್ಟಕ್ಕೆ ಬಾಲಕಿ ಬದುಕುಳಿದಿದ್ದಾಳೆ.

ಮೊಬೈಲ್​ ನೋಡಬೇಡ ಎಂದು ಮಕ್ಕಳನ್ನು ಗದರುವಾಗಲೂ ಪೋಷಕರ ಕೈಯಲ್ಲಿ ಮೊಬೈಲ್​ ಇದ್ದೇ ಇರುತ್ತದೆ. ಹೀಗಿದ್ದಾಗ ಪೋಷಕರು ಹೇಳಿದ್ದರ ಕಡೆ ಮಕ್ಕಳು ಗಮನವಾದರೂ ಹೇಗೆ ಹೋಗಬೇಕು? ಇದು ಇಂದಿನ ವಿಪರ್ಯಾಸವೇ ಸರಿ.  ವೈರಲ್  ಆಗುತ್ತಿರುವ ಈ ವಿಡಿಯೋ ನೋಡಿ.



ಶಾಲಾಬಾಲಕಿಯೊಬ್ಬಳ ಪೋಷಕರು, ಜಾಸ್ತಿ ಮೊಬೈಲ್​ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಬಾಲಕಿ ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ್ದಾಳೆ. ಹೀಗಾದರೆ ಹೇಗೆ? ಮಕ್ಕಳಿಗೆ ತಿಳಿಹೇಳುವುದು ಬಹಳ ಕಷ್ಟವೇ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *