ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಾಬ್ದಿ ಸಂಭ್ರಮ ನಾಳೆಯಿಂದ

Share with

ಉಪ್ಪಳ: ಕುಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವನ್ನು  ನಾಳೆಯಿಂದ ಮೇ ೧೧ ಮತ್ತು ೧೨ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ಸಂಭ್ರಮದಿAದ ನಡೆಯಲಿದೆ. ೧೧ರಂದು ಬೆಳಿಗ್ಗೆ ೯ಕ್ಕೆ  ಚೆಂಡೆ ವಾದನದೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳ ಸ್ವಾಗತ, ೯.೩೦ಕ್ಕೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮುಹಮ್ಮದ್ ಹಾಜಿ ಕಂಚಿಲ ರವರಿಂದ ದ್ವಜರೋಹಣ, ೧೦ಕ್ಕೆ  ನೂತನ ಸದಾಶಿವ ರಂಗಮAದಿರವನ್ನು ಉದ್ಯಮಿ ಸದಾಶಿವ ಶೆಟ್ಟಿ.ಕೆ ಕುಳೂರು ಕನ್ಯಾನ ಉದ್ಘಾಟಿಸುವರು.  ಸಭಾಂಗಣವನ್ನು ರಘುರಾಮ.ಕೆ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. ೧೦.೧೫ರಿಂದ ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮ, ೧೧.೩೦ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಗೌರವಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸುವರು. ದಾಸಣ್ಣ ಆಳ್ವ ಕುಳೂರು ಬೀಡು ಉದ್ಘಾಟಿಸುವರು. “ಅರಳು” ಸ್ಮರಣ ಸಂಚಿಕೆಯನ್ನು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್.ವಿ ಬಿಡುಗಡೆಗೊಳಿಸುವರು.  ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ  ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ಸಂಜೆ ೬ಕ್ಕೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೇ ವಿದ್ಯಾರ್ಥಿಗಳು ಹಾಗೂ ಊರವರಿಂದ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮ, ಸಂಜೆ ೬.೩೦ಕ್ಕೆ ಶಾಲಾ ಮಕ್ಕಳಿಂದ ಸೃಷ್ಟಿ ಕಿರುನಾಟಕ ಪ್ರದರ್ಶನ, ೭.೩೦ಕ್ಕೆ ನಾಡನ್ ಪಾಟ್, ೯ಕ್ಕೆ ಶಶಿಪ್ರಭಾ  ಪರಿಣಯ  ಯಕ್ಷಗಾನ, ೧೨ರಂದು ಬೆಳಿಗ್ಗೆ ೯.೩೦ಕ್ಕೆ ಹಗ್ಗ ಜಗ್ಗಾಟ, ಮಧ್ಯಾಹ್ನ ೩ಕ್ಕೆ ರಸಮಂಜರಿ, ಸಂಜೆ ೫ಕ್ಕೆ  ಡ್ಯಾನ್ಸ್ ಮತ್ತು ಕಾಮಿಡಿ ಶೋ, ರಾತ್ರಿ ೭ಕ್ಕೆ ನಡೆಯುವ ಸಮಾರೋಪದಲ್ಲಿ ಮೊಹಮ್ಮದ್ ಕಂಚಿಲ ಅಧ್ಯಕ್ಷತೆ ವಹಿಸುವರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಹಿತ ಹಲವು ಗಣ್ಯರು ಭಾಗವಹಿಸುವರು.  ಸನ್ಮಾನ ಹಾಗೂ ನಗೆ ಮಲ್ಲಿಗೆ ಪುಸ್ತಕ ಬಿಡುಗಡೆ, ಬಹುಮಾನ ವಿತರಣೆ  ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಲಿದೆ. 


Share with

Leave a Reply

Your email address will not be published. Required fields are marked *