ಕೆಂಗಲ್ಲು ಹಾಗೂ ಕಗ್ಗಲ್ಲು ಕಾರ್ಮಿಕರನ್ನು ಸಂರಕ್ಷಿಸಲು ಸಿಪಿಐ ಒತ್ತಾಯ

Share with

ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಕೆಂಗಲ್ಲು ಹಾಗೂ ಕಗ್ಗಲ್ಲು ಕೋರೆಗಳು ಕಾರ್ಯಾಚರಿಸುತ್ತಿದ್ದು ಅದರಲ್ಲಿ ಸಾವಿರಾರು ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದಾರೆ. ಸರಕಾರದ ಆದೇಶ ಪ್ರಕಾರ ಪ್ರಸ್ತುತ ಕಂದಾಯ ಹಾಗೂ ಜಿಯೋಲಜಿ ವಿಭಾಗದವರು ಕೋರೆಗಳಿಗೆ ದಾಳಿ ನಡೆಸಿ ಅದನ್ನು ಮುಚ್ಚುಗಡೆಗೊಳಿಸಲು ಆದೇಶ ನೀಡುವ ಮೂಲಕ ಕೆಂಗಲ್ಲು ಉದ್ಯಮನೇ ನಿಂತು ಹೋಗುವ ಭೀತಿಯನ್ನು ಎದುರಿಸುತ್ತಿದೆ. ಕೆಂಗಲ್ಲು ಕೋರೆಗಳಿಗೆ ದಾಳಿ ನಡೆಸುವುದು, ಅಲ್ಲಿಗೆ ಬರುವ ಹಾಗೂ ಹೋಗುವ ವಾಹನಗಳನ್ನು ಮುಟ್ಟುಗೋಲು ಹಾಕುವುದು, ಲಕ್ಷಗಟ್ಟಲೆ ದಂಡ ವಿಧಿಸುವ ಮೂಲಕ ಉದ್ಯಮದಿಂದಲೇ ಹಿಂದೆ ಸರಿಯುವಂತೆ ಪ್ರೇರಿಸುವುದು, ನಿರ್ಮಾಣ ವಲಯಕ್ಕೆ ಬೇಕಾದ ಕಲ್ಲು, ಜಲ್ಲಿ ಸಕಾಲ ದೊರಕದೆ ನಿರ್ಮಾಣ ವಲಯವನ್ನು ಸಂಧಿಗ್ದತೆಗೆ ನೂಕುವುದು ಮೊದಲಾದ ಪ್ರಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದೆ.ಇದನ್ನೇ ನಂಬಿರುವ ಸಾವಿರಾರು ಕಾರ್ಮಿಕರು ಬೀದಿಪಾಲಾಗುವುದು ಗ್ಯಾರಂಟಿ. ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಮಧ್ಯ ಪ್ರವೇಶಿಸಬೇಕೆಂದು ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಜಯರಾಮಬಲ್ಲಂಗುಡೇಲ್, ರಾಮಚಂದ್ರ ಸುರಿಬೈಲ್, ಅಜಿತ್ ಎಂ.ಸಿ ಲಾಲ್ ಬಾಗ್ ಮೊದಲಾದ ನೇತಾರರು ಮಾಜಿ ಕಂದಾಯ ಸಚಿವರೂ, ಹಾಲಿ ಶಾಸಕರೂ, ಸಿಪಿಐ ರಾಜ್ಯ ಸಹ ಕಾರ್ಯದರ್ಶಿಗಳಾದ ಇ.ಚಂದ್ರಶೇಖರನ್ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಇ.ಚಂದ್ರಶೇಖರನ್ ಈ ಬಗ್ಗೆ ಕೇರಳ ಸರಕಾರ ರಾಜ್ಯಪಾಲರಿಗೆ ಕಳುಹಿಸಿದ ತಿದ್ದುಪಡಿ ಮಸೂದೆಗೆ ಸಹಿ ಹಾಕಿದ್ದು, ಅದಕ್ಕೆ ಸಂಬಂಧ ಪಟ್ಟ ಕಾನೂನು ರೂಪೀಕರಿಸಿ ಅಂಗೀಕರಿಸಿದ ನಂತರ ಅಗತ್ಯವಿರುವ ಕಡೆ ಕೆಂಗಲ್ಲು ಕೋರೆ ಆರಂಬಿಸಲು ಪರವಾನಿಗೆ ನೀಡಿ ಈ ಉದ್ಯಮವನ್ನು ಅಧಿಕೃತಗೊಳಿಸಿ ಆ ಮೂಲಕ ಕಾರ್ಮಿಕರನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವರೇ ಮುಖ್ಯಮಂತ್ರಿಗಳ ಜತೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.ಈ ನಿಯೋಗದ ಜೊತೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು ಹಾಗೂ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್ ಜೊತೆಗಿದ್ದು ಸಹಕರಿಸಿದರು.


Share with

Leave a Reply

Your email address will not be published. Required fields are marked *