
ಮಂಜೇಶ್ವರ: ಮೀಂಜ ಪಂಚಾಯತ್ ವ್ಯಾಪ್ತಿಯ ಬೇಕರಿ ಜಂಕ್ಷನ್ ಬಳಿಯ ಕಳಿಯೂರು ನಿವಾಸಿ ಮಾಧವ [೬೩] ಅಲ್ಪ ಕಾಲದ ಅಸೌಖ್ಯದಿಂದ ದೇರಳಕಟ್ಟೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಮಂಜೇಶ್ವರ, ವರ್ಕಾಡಿ ವಿದ್ಯುತ್ ಇಲಾಖೆಯಲ್ಲಿ ದಿನ ವೇತನದಲ್ಲಿ ಲೈನ್ಮ್ಯಾನ್ ಕೆಲಸವನ್ನು ನಿರ್ವಹಿಸುತ್ತಿದರು. ಮೃತರು ಪತ್ನಿ ಲಲಿತ, ಮಕ್ಕಳಾದ ವಸಂತ, ಸುರೇಶ, ಸುರೇಖ, ಸೊಸೆ ಅಶ್ವಿನಿ ಸಹೋದರ, ಸಹೋದರಿಯರಾದ ಅಬ್ಬಣ್ಣ, ಸುಂದರ, ರಾಜೀವಿ, ಲಕ್ಷ್ಮೀ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





