
ಹೊಸಂಗಡಿ : ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆ ಯಾಗಿದೆ, ಯಾವುದೇ ಹೊಸ ಯೋಜನೆ ಗಳನ್ನು ತರುವಲ್ಲಿ ಮಂಜೇಶ್ವರ ಶಾಸಕರು ಪ್ರಯತ್ನ ಮಾಡುತ್ತಿಲ್ಲ.
ಕೇಂದ್ರ ಸರಕಾರದ ಹೆದ್ದಾರಿ ಯೋಜನೆ ಮಾತ್ರ ಮಂಡಲ ದಲ್ಲಿ ಕಾಣುತ್ತೆ. Sslc ಬಳಿಕ +2 ಸಿಟ್ ಗಳ ಅಭಾವ ಎದ್ದುಕಾಣುತಿದೆ, ಎಲ್ಲಾ ವಿದ್ಯಾರ್ಥಿಗಳು ಮಂಗಳೂರನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಮಿನಿ ಮಾಸ್ ಲೈಟ್ ಗಳನ್ನು ಅವರು ಸ್ಥಾಪಿಸುವುದು ಒಂದು ಕೋಮಿನ ಧಾರ್ಮಿಕ ಕೇಂದ್ರಗಳ ಪಕ್ಕದಲ್ಲಿ ಮಾತ್ರ ಎಂದು ಬಿಜೆಪಿ ಆರೋಪಿಸಿದೆ.ಸಮಸ್ಯೆ ಗಳಿಗೆ ಸ್ಪಂದಿಸದ ಶಾಸಕರು ಮಂಜೇಶ್ವರ ಅಗತ್ಯ ವೇ ಎಂದು ಬಿಜೆಪಿ ಪ್ರಶ್ನೆಸಿದೆ.? ಬಿಜೆಪಿ ಮಂಜೇಶ್ವರ ಮಂಡಲ ಸಭೆ ಹೊಸಂಗಡಿ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಜರಗಿತು.
ಆದರ್ಶ್ ಬಿ ಎಂ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಪ್ರ.ಕಾರ್ಯದರ್ಶಿ
ವೇಲಾಯುದನ್ ಸಭೆ ಉದ್ಘಾಟಿಸಿದರು, ಮುಖಂಡರಾದ ವಿಜಯ್ ರೈ, ಅಶ್ವಿನಿ ಎಂ ಎಲ್, ಎ. ಕೆ ಕಯ್ಯಾರ್ , ಸತೀಶಚಂದ್ರ ಭಂಡಾರಿ, ನ್ಯಾ. ಬಾಲಕೃಷ್ಣ ಶೆಟ್ಟಿ, ಮಣಿಕಂಠ ರೈ ಸುನಿಲ್ ಅನಂತ ಪುರ, ವಸಂತ ಮಯ್ಯ ವಿಘ್ನಶ್ವರ ಮಾಸ್ಟರ್ ಕೇದುಕೋಡಿ, ಯಾದವ ಬಡಾಜೆ, ಭಾಸ್ಕರ ಪೊಯ್ಯೇ, ಹರಿಶ್ಚಂದ್ರ ಎಂ, ನಾರಾಯಣ ನಾಯ್ಕ್ ಮಿಂಜ, ಸಂತೋಷ್ ದೈಗೋಳಿ,ಆಶಾಲತಾ ಪೆಲಪಾಡಿ,
ಲೋಕೇಶ್ ಜೋಡುಕಲ್ಲು,ಮೋರ್ಚಾ ನೇತಾರರು, ಜನಪ್ರತಿನಿದಿನಗಳು ಉಪಸ್ಥಿತರಿದ್ದರು.
ಜುಲೈ 28 ಕುಂಬಳೆಯಲ್ಲಿ ಕಾರ್ಯಕರ್ತರ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. Kv ಭಟ್ ಸ್ವಾಗತಿಸಿ, ಯತೀರಾಜ್ ಶೆಟ್ಟಿ ವಂದಿಸಿದರು.





