
ಮಂಗಲ್ಪಾಡಿ: ಚೆರುಗೋಳಿ ಶ್ರೀ ಉಳ್ಳಾಲ್ತಿ ಧೂಮಾವತಿ ಕೋಮಾರು ಚಾಮುಂಡಿ ಬಟ ದೈವಗಳ ವರ್ಷಂಪ್ರತಿ ನಡೆಯುವ ಪ್ರಸಿದ್ದ ಚೆರುಗೋಳಿ [ಸೊರೋಲ್] ಜಾತ್ರಾ ಮಹೋತ್ಸವ ಡಿ.15ರಿಂದ 23ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 15ರಂದು ಮಧ್ಯಾಹ್ನ 3.30ಕ್ಕೆ ಕೋಳಿ ಕುಂಟ ಮುಹೂರ್ತ, 21ರಂದು ಬೆಳಿಗ್ಗೆ 9.30ಕ್ಕೆ ದೈವಸ್ಥಾನದಲ್ಲಿ ಗಣಹೋಮ, ಶುದ್ದಿ ಕಲಶ, ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ ಮಧ್ಯಾಹ್ನ 12.30ಕ್ಕೆ ಬಲಿವಾಡು ಕೂಟ, ಸಮಾರಾಧನೆ, ಸಾಮೂಹಿಕ ಪ್ರಾರ್ಥನೆ, ಸಂಜೆ 6.30ರಿಂದ ಶ್ರೀ ಸತ್ಯನಾರಾಯಣ ಭಜನಾ ಸಂಘದಿoದ ಭಜನೆ, ರಾತ್ರಿ 8ಕ್ಕೆ ಶ್ರೀ ಐವರು ದೈವಂಗಳ ದರ್ಶನ ಕೂಟ, ಪ್ರಸಾದ ವಿತರಣೆ, 8.30ಕ್ಕೆ ನಂದ್ರಾಡಿ ಬಾರಿಕೆ ಶ್ರೀ ಧೂಮಾವತಿ ದೈವಸ್ಥಾನ ಮತ್ತು ಇಚ್ಲಂಗೋಡು ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರೀ ದೈವಸ್ಥಾನದಿಂದ ಶ್ರೀ ದೈವಗಳ ಭಂಡಾರ ಹೊರಡುವುದು, ರಾತ್ರಿ 10ಕ್ಕೆ ಶ್ರೀ ದೈವಗಳ ಭಂಡಾರ ಶ್ರೀ ಸದಾಶಿವ ದೇವರ ಸನ್ನಿಧಿಗೆ ಆಗಮನ, ದರ್ಶನ, ದೈವಸ್ಥಾನದಲ್ಲಿ÷ ಭಂಡಾರ ಏರುವುದು. 22ರಂದು ರಾತ್ರಿ 10ಕ್ಕೆ ಶ್ರೀ ಧೂಮಾವತಿ ದೈವದ ನೇಮ, ಹರಿಕೆ, ಪ್ರಸಾದ ವಿತರಣೆ, ಒಲಸರಿ ಕಟ್ಟಿಗೆ ಶ್ರೀ ದೈವಗಳ ವರ್ಷಾವಧಿ ಒಲಸರಿ, 23ರಂದು ರಾತ್ರಿ 12ಕ್ಕೆ ಶ್ರೀ ಬಬ್ಬರ್ಯ ದೈವದ ಕೋಲ, ಶ್ರೀ ಕೋಮಾರು ಚಾಮುಂಡಿ, ಬಂಟ ದೈವಗಳ ನೇಮ, ಹರಿಕೆ, ಪ್ರಸಾದ ವಿತರಣೆ, ಒಲಸರಿ ಕಟ್ಟಿಗೆ ಶ್ರೀ ದೈವಗಳ ವರ್ಷಾವಧಿ ಒಲಸರಿ, 24ರಂದು ಬೆಳಿಗ್ಗೆ 6ಕ್ಕೆ ಶ್ರೀ ಉಳ್ಳಾಲ್ತಿ ದೈವದ ಕಟ್ಟೆಯಲ್ಲಿ ತಂಬಿಲ, ದರ್ಶನ ಭಂಡಾರ ಇಳಿಯುವುದು, ಬೆಳಿಗ್ಗೆ 7.30ಕ್ಕೆ ದೈವಸ್ಥಾನದಲ್ಲಿ ಶುದ್ದಿ ಕಲಶ ನಡೆಯಲಿದೆ. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ಶ್ರೀ ಸದಾಶಿವ ಕಲಾವೃಂದ ಅಂಬಾರು ಇದರ 51ನೇ ವಾರ್ಷಿಕೋತ್ಸವದ ಪ್ರಯುಕ್ತ 22ರಂದು ರಾತ್ರಿ 7ಕ್ಕೆ ರಸಮಂಜರಿ, 23ರಂದು ರಾತ್ರಿ 7ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ರಾತ್ರಿ 10.30ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ಅಷ್ಟೆಮಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.





