
ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಒನ್‌ಸೈಟ್ ಎಸ್ಸಿಲೋರ್ ಲುಕ್ಷೆÆÃಟಿಕಾ ಫೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ಕಾಸರಗೋಡು ಮತ್ತು ಮಂಗಳೂರು, ಡಾ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ)ನ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹಾಗೂ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಮಂಗಳೂರು ಇವರ ಸಹಯೋಗದೊಂದಿಗೆ “ಕೊಂಡೆವೂರು ಮಠದಲ್ಲಿ ಪ್ರತೀ ತಿಂಗಳು ನಡೆಯುವ ಉಚಿತ ಆಯುರ್ವೇದಿಕ್ ಚಿಕಿತ್ಸಾ ಶಿಬಿರದ, ಉದ್ಘಾಟನಾ ಕಾರ್ಯಕ್ರಮ” ವು ದಿನಾಂಕ 15.12.2024 ಆದಿತ್ಯವಾರದಂದು ಬೆಳಿಗ್ಗೆ 9.00 ಕ್ಕೆ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ , ಡಾ. ಗುರುಪ್ರಸಾದ್, ಪ್ರಸಾದ್ ನೇತ್ರಾಲಯ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು.


ಡಾ.ಎಮ್ ಬಿ ಪುರಾಣಿಕ್, ಅಧ್ಯಕ್ಷರು ಶಾರದಾ ಸಮೂಹ ಸಂಸ್ಥೆಗಳು ಮಂಗಳೂರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಧಾರ್ಮಿಕ ಶಿಕ್ಷಣ ನೀಡಿ ಸಂಸ್ಕಾರಯುತವಾಗಿ ಬೆಳೆಯುವಂತೆ ಮಾಡಬೇಕು. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಸುಶ್ರೂಷೆ ನೀಡುವಂತಹ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೊಳಿಸಿದ್ದಾರೆ, ಇದರ ಸದುಪಯೋಗ ಪಡೆದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಹೇಳಿದರು.
ಡಾ. ಸಂದೀಪ್ ಬೇಕಲ್ ಆರ್( ಪ್ರಾಂಶುಪಾಲರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು,ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಮಂಗಳೂರು) ಡಾ. ಲಿಖಿತ್, ರೈ.(ಜನರಲ್ ಸರ್ಜನ್ ಕಣಚೂರು ಮೆಡಿಕಲ್ ಕಾಲೇಜು,) ಡಾ. ವಿವೇಕ್‌ಜೆ(ಬಿ.ಎ.ಎಮ್.ಎಸ್,ಎಮ್.ಎಸ್(ಆಯು)ಡಿವಿಪಿ ಪಿಹೆಚ್‌ಡಿ ಆಯುರ್ವೇದ ಶಸ್ತçಚಿಕಿತ್ಸಕರು ಮತ್ತು ಕ್ಯಾನ್ಸರ್ ತಜ್ಞರು) ಶ್ರೀ ಕೆ ಆರ್ ಜಯಾನಂದ ಅಧ್ಯಕ್ಷರು ಕೇರಳ ತುಳು ಅಕಾಡೆಮಿ, ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ,ವಿಶ್ವಸ್ಥರು ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ) ಉಪಸ್ಥಿತರಿದ್ದರು.


ಪರಮಪೂಜ್ಯ ಗುರೂಜಿಯವರು ಆಶ್ರಮದ ವತಿಯಿಂದ ನಡೆಸಿದ ಮೆಡಿಕಲ್ ಕ್ಯಾಂಪ್ ಗೆ ಸಹಕರಿಸಿದ ವೈದ್ಯರಿಗೆ ಕೃತಜ್ಞತೆ ಹೇಳುತ್ತಾ ಪ್ರತಿಯೊಬ್ಬರು ದೇವರ ಪ್ರೀತಿ ಸಂಪಾದನೆ ಮಾಡಬೇಕು ಅದಕ್ಕಾಗಿ ದೇವರ ಸ್ಮರಣೆ ಮಾಡಬೇಕು . ಜಗತ್ತನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಜೀವರಾಶಿಗಳನ್ನು ರಕ್ಷಣೆ ಮಾಡುವ ಮೂಲಕ ಸುಂದರ ಪರಿಸರ ನಿರ್ಮಾಣ ಮಾಡಬೇಕು, ಹಸುವನ್ನು ಸಾಕುವ ಮೂಲಕ ಸಾವಯವ ಕೃಷಿಯನ್ನು ಮಾಡೋಣ, ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರ ಸೇವಿಸೋಣ ಎಲ್ಲರೂ ಶಿಬಿರದ ಪ್ರಯೋಜನವನ್ನು ಪಡೆಯಿರಿ ಎಂದು ಹೇಳುತ್ತಾ ದಿನಾಂಕ 26.1.2025 ರಂದು ಜರಗುವ ವಿಷ್ಣುಸಹಸ್ರನಾಮ ಅಭಿಯಾನದಲ್ಲಿ ಭಾಗವಹಿಸುವಂತೆ ಸೂಚಿಸಿದರು.
ಶ್ರೀ ಕೆ ಎಂ ಗಂಗಾಧರ್ ಸ್ವಾಗತಿಸಿ ವಂದಿಸಿದರು, ಶ್ರೀಮತಿ ಮಲ್ಲಿಕಾ ಮಾತಾಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. 320 ಕ್ಕೂ ಅಧಿಕ ಜನರು ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು 154 ಜನರು ಆಯುರ್ವೇದಿಕ್ ಚಿಕಿತ್ಸಾಶಿಬಿರದ ಪ್ರಯೋಜನವನ್ನು ಪಡೆದರು. ಅಗತ್ಯವುಳ್ಳ 40 ಮಂದಿಗೆ ಕಣ್ಣಿನ ಶಸ್ರö್ತಚಿಕಿತ್ಸೆಗಾಗಿ ಪ್ರಸಾದ್ ನೇತ್ರಾಲಯದಲ್ಲಿ ಉನ್ನತ ತಪಾಸಣೆಗಾಗಿ ಕೊಂಡೆವೂರು ಮಠಕ್ಕೆ ಆಗಮಿಸುವಂತೆಯೂ 204 ಮಂದಿಗೆ ಉಚಿತ ಕನ್ನಡಕ ವಿತರಿಸಲಾಗುವುದೆಂದು ಸೂಚಿಸಲಾಗಿದೆ.




