
ಮಹಾ ಕುಂಭಮೇಳದಲ್ಲಿ ನೂಕುನುಗ್ಗಲು ಉಂಟಾಗಿ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. 100ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಅವರಿಗೆ ತಾತ್ಕಾಲಿಕ ವೈದ್ಯಕೀಯ ಶಿಬಿರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಘಟನೆಯ ತುರ್ತು ಪರಿಶೀಲನೆ ನಡೆಸಿದ ಸಿಎಂ ಯೋಗಿ, ಯುದ್ದೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಶಿಬಿರದಲ್ಲಿರುವ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ ಮೋದಿ ಮತ್ತು ಶಾ ವಿಚಾರಿಸಿದ್ದಾರೆ.
ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ 15ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನು ಘಟನೆ ಬಗ್ಗೆ ರಾಜ್ಯದ ಓರ್ವ ಮಹಿಳೆ ಆತಂಕ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಮಹಿಳೆ ವಿದ್ಯಾ ಸಾಹು ಎನ್ನುವವರು ಮಾತನಾಡಿ, ನೆಮ್ಮದಿಯಿಂದಲೇ ಕುಂಭಮೇಳದಲ್ಲಿ ನಡೆದುಕೊಂಡು ಹೋಗುತ್ತಿದ್ದೆವು. ಆದರೆ ಎಲ್ಲಿಂದ ಬಂದರೋ ಗೊತ್ತಿಲ್ಲ ಕೆಲ ಜನ ಮುಂದಕ್ಕೆ ಹೋಗುತ್ತಿದ್ದವರು ಏಕಾಏಕಿ ಹಿಂದಕ್ಕೆ ಓಡಿ ಬಂದರು. ಇದರಿಂದ ಹಿಂದಕ್ಕೆ ಓಡಲಾಗದೇ ಕೆಲವರು ಕಂಬಕ್ಕೆ ಗುದ್ದಿಕೊಂಡು ನೆಲಕ್ಕೆ ಬಿದ್ದರು ಎಂದಿದ್ದಾರೆ.




